ಜೀವನದ ಜಿಗುಪ್ಸೆಯಿಂದ ಸೆಲ್ಪಿ ವೀಡಿಯೋ ಮಾಡಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗದ ಕರವರ್ತಿ ಗ್ರಾಮದಲ್ಲಿ ನಡೆದಿದೆ. ಪವನ್ ಕುಮಾರ್ (19).ಮೃತ ಯುವಕ. ನನಗೆ ಈ ಜೀವನ ಬೇಡ, ನನ್ನ ನಂಬಿಕೆ ನನಗೆ ದ್ರೋಹ ಮಾಡಿದೆ ಎಂದು ವಿಡಿಯೋ ಮಾಡಿ ಸ್ಟೇಟಸ್ ಹಾಕಿದ್ದ ಯುವಕ ಹೊಂಡದಲ್ಲಿ ಹಾರಿ ಮೃತಪಟ್ಟಿದ್ದಾನೆ. ಕಳೆದ ಎರಡು ವರ್ಷದಿಂದ ಚಿತ್ರದುರ್ಗದಲ್ಲಿ ನೆಲೆಸಿದ್ದ ಪವನ್ ಹಾಲಿನ ಪಾಯಿಂಟ್ ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆದ್ರೇ ಮೃತನ ಮೂಲ ಇನ್ನೂ ಪತ್ತೆಯಾಗಿಲ್ಲ.ಈ ಕುರಿತು ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





