2020ರ ಕೊಲೆ ಕೇಸ್‌ಗೆ ಮತ್ತೆ ರಕ್ತದ ನೆರಳು..! ಹ್ಯಾರಿಸ್ ಪಠಾಣ್ ಮೇಲೆ ಏಕಾಏಕಿ ಹಲ್ಲೆ..!
ಹುಬ್ಬಳ್ಳಿ ಬ್ರೇಕಿಂಗ್: ಫ್ರೂಟ್ ಇರ್ಫಾನ್ ಕೊಲೆ ಕೇಸ್‌ಗೆ ಮತ್ತೆ ರಕ್ತದ ನೆರಳು…
ಮದುವೆ ಸಮಾರಂಭದಲ್ಲೇ ಪ್ರಮುಖ ಆರೋಪಿ ಹ್ಯಾರಿಸ್ ಪಠಾಣ್ ಮೇಲೆ ದಾಳಿ..!
ಹುಬ್ಬಳ್ಳಿ: 2020ರಲ್ಲಿ ನಡೆದ ಕುಖ್ಯಾತ ರೌಡಿ ಶೀಟರ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ‘ಫ್ರೂಟ್ ಇರ್ಫಾನ್’ ಅಲಿಯಾಸ್ ಇರ್ಫಾನ್ ಹಂಚಿನಾಳ ಹತ್ಯೆ ಪ್ರಕರಣ ಇದೀಗ ಮತ್ತೆ ಸದ್ದು ಮಾಡಿದೆ…
2020ರ ಆಗಸ್ಟ್ 6ರಂದು ಹುಬ್ಬಳ್ಳಿಯ ಕಾರವಾರ ರಸ್ತೆಯ ಅಲ್-ತಾಜ್ ಹೋಟೆಲ್ ಬಳಿ ಫ್ರೂಟ್ ಇರ್ಫಾನ್ ಹತ್ಯೆಯಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನೆಂದು ಹೇಳಲಾಗಿರುವ ಹ್ಯಾರಿಸ್ ಪಠಾಣ್ ಮೇಲೆ ಇದೀಗ ಮದುವೆ ಸಮಾರಂಭದಲ್ಲೇ ದಾಳಿ ನಡೆದಿದೆ ಎನ್ನಲಾಗಿದೆ…
ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಗೇರಿಯಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮಕ್ಕೆ ಹ್ಯಾರಿಸ್ ಪಠಾಣ್ ಬಂದಿದ್ದ ವೇಳೆ ಏಕಾಏಕಿ ಕೆಲವರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ…
ಪ್ರಾಥಮಿಕ ಮಾಹಿತಿಯ ಪ್ರಕಾರ, ಫ್ರೂಟ್ ಇರ್ಫಾನ್ ಪುತ್ರ ಅರ್ಬಾಜ್ ಸೇರಿದಂತೆ ನಾಲ್ವರು ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆದರೆ ದಾಳಿಯಲ್ಲಿ ಯಾರು ಭಾಗಿಯಾಗಿದ್ದರು, ಹಲ್ಲೆಗೆ ನಿಖರ ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದ ಸ್ಪಷ್ಟವಾಗಬೇಕಿದೆ…
ಘಟನೆಯಿಂದ ಮದುವೆ ಸಮಾರಂಭದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಮಾಹಿತಿ ತಿಳಿದು ಕೇಶ್ವಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…
ಹಳೆಯ ಕೊಲೆ ಪ್ರಕರಣ… ಈಗ ಹೊಸ ದಾಳಿ..!
ಫ್ರೂಟ್ ಇರ್ಫಾನ್ ಹತ್ಯೆ ಪ್ರಕರಣದ ಹಿನ್ನೆಲೆ ಹೊಂದಿರುವ ಹ್ಯಾರಿಸ್ ಪಠಾಣ್ ಮೇಲೆಯೇ ಇದೀಗ ದಾಳಿ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ…ಹಳೆಯ ವೈಷಮ್ಯದ ಮುಂದುವರಿಕೆಯೇ ಈ ದಾಳಿ..?ಅಥವಾ ದಾಳಿಗೆ ಬೇರೆಯದೇ ಕಾರಣವಿದೆಯೇ..?
ಈ ಎಲ್ಲಾ ಅಂಶಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಹಲ್ಲೆ ಪ್ರಕರಣದ ಸಂಪೂರ್ಣ ಚಿತ್ರಣ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news

