Breaking News

ಒಬ್ಬನಿಗೆ ಬರ್ತ್ ಡೇ ಪಾರ್ಟಿ ಮಾಡುವಾಸೆ, ಮತ್ತೊಬ್ಬನಿಗೆ ಬೈಕ್ ಕೊಳ್ಳುವ ಆಸೆ: ಚಿನ್ನದ ಸರಕ್ಕಾಗಿ ಆಪ್ತ ಸ್ನೇಹಿತನನ್ನೇ ಕೊಂದ ಬಾಲಕರು

ಥಾಣೆ: ಮಹಾರಾಷ್ಟ್ರದ ಥಾಣೆಯಲ್ಲಿ ಚಿನ್ನದ ಸರಕ್ಕಾಗಿ 17 ವರ್ಷದ ಪ್ರಜ್ಯೋತ್ ಕಾಂಬ್ಳೆ ಎಂಬ ಬಾಲಕನನ್ನು ಆತನ ಇಬ್ಬರು ಅಪ್ರಾಪ್ತ ಸ್ನೇಹಿತರೇ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಒಬ್ಬನಿಗೆ ಹುಟ್ಟುಹಬ್ಬ ಆಚರಿಸಲು, ಮತ್ತೊಬ್ಬನಿಗೆ ಬೈಕ್ ಖರೀದಿಸಲು ಹಣ ಬೇಕಾಗಿತ್ತು. ಸೆಪ್ಟೆಂಬರ್ 24ರಂದು ಪ್ರಜ್ಯೋತ್‌ನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಕುವಿನಿಂದ ಇರಿದು, ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಸಾಕ್ಷ್ಯ ನಾಶಪಡಿಸಲು ಮೃತದೇಹಕ್ಕೆ ಬೆಂಕಿ ಹಚ್ಚಿ, ಮೊಬೈಲ್‌ ಅನ್ನು ಬಸ್‌ಗೆ ಎಸೆದಿದ್ದಾರೆ. ಸುಮಾರು 80ರಿಂದ 90 ಸಿಸಿಟಿವಿ ದೃಶ್ಯಾವಳಿ ಹಾಗೂ ಮೊಬೈಲ್ ಲೊಕೇಷನ್ ಆಧರಿಸಿ ಪೊಲೀಸರು ಇಬ್ಬರು ಅಪ್ರಾಪ್ತ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿದಿದೆ.

Share News

About BigTv News

Check Also

ಬೆಂಗಳೂರಿನ ಸ್ಪಾ, ಸಲೂನ್‌ಗಳಲ್ಲಿ ನೈತಿಕ ಪೊಲೀಸ್‌ಗಿರಿ, ಬ್ಲಾಕ್‌ಮೇಲ್; ನಕಲಿ ವರದಿಗಾರರು ಸೇರಿ 6 ಮಂದಿ ಪೊಲೀಸರ ಬಲೆಗೆ!

ಬೆಂಗಳೂರು: ಸ್ಪಾ ಮತ್ತು ಸಲೂನ್‌ಗಳಿಗೆ ನುಗ್ಗಿ ನಕಲಿ ಮಾಧ್ಯಮ ಐಡಿ ಕಾರ್ಡ್ ತೋರಿಸಿ, ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ಹಣ …

Leave a Reply

Your email address will not be published. Required fields are marked *