ಹೊಸಪೇಟೆ : ತುಂಗಭದ್ರಾ ಅಣೆಕಟ್ಟೆಯಿಂದ 80 ಸಾವಿರ ಕ್ಯುಸೆಕ್‌ಗೂ ಅಧಿಕ ನೀರನ್ನು 20 ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ ಹರಿಸುತ್ತಿರುವ ಕಾರಣ ಹಂಪಿಯ ಪುರಂದರ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ. ಈ ವರ್ಷ ಮೂರನೇ ಬಾರಿಗೆ ಈ ಮಂಟಪ ಮುಳುಗಡೆಯಾಗಿದೆ.
ಹಿಂಗಾರು ಮಳೆಯಿಂದ ಕೂಡ್ಲಿಗಿ,ಕೊಟ್ಟೂರು, ಹರಪನಹಳ್ಳಿ ಭಾಗದಲ್ಲಿ ಹಲವು ಕೆರೆಗಳು ತುಂಬಿವೆ. ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮಾಲವಿ ಜಲಾಶಯ 20 ಅಡಿ ಎತ್ತರವಿದ್ದು, ಸದ್ಯ 14 ಅಡಿ ನೀರು ತುಂಬಿದೆ. ಈ ಜಲಾಶಯ ಭರ್ತಿಯಾದರೆ 2 ಟಿಂಎಸಿ ಅಡಿ ನೀರು ಸಂಗ್ರಹವಾಗಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





