Breaking News

ಪೋಕ್ಸೋ ಪ್ರಕರಣದಲ್ಲಿ KIMS ಟ್ವಿಸ್ಟ್..! ಇಬ್ಬರು ಆರೋಪಿಗಳಿಗೆ ವೈದ್ಯಕೀಯ ಕಸ್ಟಡಿ ಯಾಕೆ..? ಹಣದ ಡೀಲ್ ಆರೋಪದ ಅಸಲಿ ಸತ್ಯವೇನು..?

ಪೋಕ್ಸೋ ಕೇಸ್‌ನಲ್ಲಿ 9 ಮಂದಿ ಠಾಣೆಗೆ..! ಒಬ್ಬನಿಗಷ್ಟೇ ಕೇಸ್ ಯಾಕೆ..? ಉಳಿದ 8 ಮಂದಿಯ ವಿಚಾರವೇನು — ಇನ್ಸ್‌ಪೆಕ್ಟರ್ ಪಾತ್ರದ ಬಗ್ಗೆ ಪ್ರಶ್ನೆ..!

KIMSನಲ್ಲಿ ಇಬ್ಬರು ಆರೋಪಿಗಳು..! ವೈದ್ಯಕೀಯ ಕಸ್ಟಡಿಯಾ, ‘ಕಾಂಚನ’ದ ಆಟವಾ..?

ಹಣದ ಡೀಲ್ ಎಷ್ಟು..? ಯಾರ ಜೇಬಿಗೆ ಎಷ್ಟು ಹಣ..? ಇನ್ಸ್‌ಪೆಕ್ಟರ್ ಪಾತ್ರವೇನು..?

ಹುಬ್ಬಳ್ಳಿ: ಹುಬ್ಬಳ್ಳಿಯ ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೊಳಗಾದ ಆರೋಪಿಗಳ ವಿಚಾರ ಇದೀಗ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಒಬ್ಬ ಆರೋಪಿ ಜೈಲಿನಲ್ಲಿದ್ದರೆ, ಇನ್ನಿಬ್ಬರು ಆರೋಪಿಗಳನ್ನು KIMS ಆಸ್ಪತ್ರೆಯಲ್ಲಿ ವೈದ್ಯಕೀಯ ಕಸ್ಟಡಿಯಲ್ಲಿ ಇರಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ…

ಆರೋಪಿಗಳನ್ನು ಆಸ್ಪತ್ರೆಯಲ್ಲಿ ಇರಿಸುವಷ್ಟು ಗಂಭೀರ ಆರೋಗ್ಯ ಸಮಸ್ಯೆ ಏನಿತ್ತು? ನಿಜವಾಗಿಯೂ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿತ್ತೇ? ವೈದ್ಯಕೀಯ ವರದಿಯಲ್ಲಿ ಏನಿದೆ? ಎಂಬ ಪ್ರಶ್ನೆಗಳು ಇದೀಗ ಮುನ್ನೆಲೆಗೆ ಬಂದಿವೆ…

ಹಣದ ಡೀಲ್ ಎಷ್ಟು..? ಯಾರಿಗೆ ಎಷ್ಟು ಹಣ ತಲುಪಿದೆ..?

ಈ ಪ್ರಕರಣದ ಸುತ್ತ ಹಣದ ವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ನಿಜವಾಗಿಯೂ ಎಷ್ಟು ಹಣದ ಡೀಲ್ ನಡೆದಿದೆ? ಹಣ ನೀಡಿದವರು ಯಾರು? ಪಡೆದವರು ಯಾರು? ಮಧ್ಯವರ್ತಿಗಳ ಪಾತ್ರವೇನು? ಎಂಬ ಪ್ರಶ್ನೆಗಳು ಎದ್ದಿವೆ…

ಆರೋಪಿಗಳನ್ನು KIMSನಲ್ಲಿ ಇರಿಸುವ ಪ್ರಕ್ರಿಯೆಗೂ ಈ ಹಣದ ವ್ಯವಹಾರಕ್ಕೂ ಸಂಬಂಧವಿತ್ತೇ? ಜಾಮೀನು ಅಥವಾ ಪ್ರಕರಣದ ವಿಚಾರದಲ್ಲಿ ಹಣದ ವ್ಯವಹಾರ ನಡೆದಿತ್ತೇ? ಪೊಲೀಸ್ ಅಧಿಕಾರಿ ಅಥವಾ ಇತರರ ಪಾತ್ರವಿತ್ತೇ? ಈ ಎಲ್ಲ ಅಂಶಗಳು ದಾಖಲೆಗಳ ಆಧಾರದಲ್ಲಿ ತನಿಖೆಯಾಗಬೇಕಿದೆ….

ಇನ್ಸ್‌ಪೆಕ್ಟರ್ ಪಾತ್ರವೇನು..?

ಆರೋಪಿಗಳನ್ನು KIMSಗೆ ಕಳುಹಿಸುವ ನಿರ್ಧಾರವನ್ನು ಕೈಗೊಂಡವರು ಯಾರು? ಯಾವ ವೈದ್ಯಕೀಯ ವರದಿಯ ಆಧಾರದ ಮೇಲೆ ಆಸ್ಪತ್ರೆಗೆ ದಾಖಲಿಸಲಾಯಿತು? ಈ ನಿರ್ಧಾರದಲ್ಲಿ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಪಾತ್ರವೇನು? ಎಂಬುದಕ್ಕೆ ಸ್ಪಷ್ಟನೆ ಅಗತ್ಯವಿದೆ…

9 ಮಂದಿ ಠಾಣೆಗೆ ಬಂದರು… ಒಬ್ಬನಿಗಷ್ಟೇ ಕೇಸ್ ಯಾಕೆ..?

ಒಟ್ಟು 9 ಮಂದಿಯನ್ನು ಠಾಣೆಗೆ ಕರೆತರಲಾಗಿತ್ತು, ಆದರೆ ಒಬ್ಬನ ವಿರುದ್ಧ ಮಾತ್ರ ಪ್ರಕರಣ ದಾಖಲಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಹಾಗಾದರೆ ಉಳಿದ 8 ಮಂದಿಯ ವಿಚಾರವೇನು? ಅವರನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡದಿರಲು ಕಾರಣವೇನು? ಈ ಕುರಿತು ನ್ಯಾಯಾಲಯದಲ್ಲಿ ಪ್ರಶ್ನೆ ಎದ್ದಿದೆ ಎನ್ನಲಾಗುತ್ತಿದೆ…

ತನಿಖೆಯಿಂದ ಹೊರಬರಬೇಕಿದೆ ಅಸಲಿ ಸತ್ಯ!

KIMSನ ವೈದ್ಯಕೀಯ ದಾಖಲೆಗಳು, ಪೊಲೀಸ್ ಕೇಸ್ ಡೈರಿ, ರಿಮಾಂಡ್ ದಾಖಲೆಗಳು, ನ್ಯಾಯಾಲಯದ ಆದೇಶಗಳು ಹಾಗೂ ಸಂಬಂಧಿತ ಹಣಕಾಸಿನ ವಹಿವಾಟುಗಳ ಪರಿಶೀಲನೆಯಿಂದಲೇ ಆರೋಪಗಳ ಸತ್ಯಾಸತ್ಯತೆ ಹೊರಬರಬೇಕಿದೆ…

ಇದು ನಿಜವಾದ ವೈದ್ಯಕೀಯ ಕಸ್ಟಡಿಯಾ? ಆರೋಪಿಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿತ್ತೇ? ಹಣದ ಡೀಲ್ ನಡೆದಿದ್ದರೆ ಅದರ ಮೊತ್ತ ಎಷ್ಟು? ಯಾರ್ಯಾರಿಗೆ ಹಣ ತಲುಪಿದೆ? ಇನ್ಸ್‌ಪೆಕ್ಟರ್ ಪಾತ್ರವೇನು…?

ಈ ಎಲ್ಲಾ ಪ್ರಶ್ನೆಗಳಿಗೆ ಪೊಲೀಸ್ ಇಲಾಖೆ, KIMS ಆಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ದಾಖಲೆಗಳ ಸಮೇತ ಸ್ಪಷ್ಟನೆ ನೀಡಬೇಕಿದೆ….

ಸಾಕ್ಷ್ಯಾಧಾರಗಳೇ ಸತ್ಯವನ್ನು ಬಯಲಿಗೆಳೆಯಬೇಕು…

ಇಡೀ ಪ್ರಕರಣದ ಸುತ್ತ ಎದ್ದಿರುವ ಗಂಭೀರ ಪ್ರಶ್ನೆಗಳ ಕುರಿತು ಹೆಚ್ಚಿನ ಮಾಹಿತಿ — ಬಿಗ್ ಟಿವಿ ನ್ಯೂಸ್‌ನಲ್ಲಿ.

Share News

About Shaikh BigTv

Check Also

ಸತ್ತ ಜಾನುವಾರುಗಳ ಪರಿಹಾರದ ಹಣ ನುಂಗಿದ ಪಾಪಿಗಳು : ರಾಬಕೋವಿ ಹಾಲು ಒಕ್ಕೂಟದ ಮತ್ತಷ್ಟು ಅಕ್ರಮ ಬಯಲು!

ಬಳ್ಳಾರಿ: ರಾಬಕೋವಿ ಹಾಲು ಒಕ್ಕೂಟದಲ್ಲಿ ಮೃತಪಟ್ಟ ಜಾನುವಾರುಗಳ ವಿಮಾ ಪರಿಹಾರದ ಹಣ ದುರುಪಯೋಗಪಡಿಸಿಕೊಂಡು ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿರುವ ಗಂಭೀರ …

Leave a Reply

Your email address will not be published. Required fields are marked *