Breaking News

ಯುವತಿ ವಿಚಾರಕ್ಕೆ ಕಿರಿಕ್‌ – ಎರಡು ಗುಂಪುಗಳ ನಡುವೆ ತಲ್ವಾರ್‌, ಚಾಕು ಹಿಡಿದು ಬಡಿದಾಟ!

ಬೆಳಗಾವಿ: ಯುವತಿಯೊಂದಿಗಿನ ಸಲುಗೆಯ ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ಮಾರಣಾಂತಿಕ ಹಲ್ಲೆಯಲ್ಲಿ ಅಂತ್ಯಗೊಂಡಿದೆ. ಪ್ರಕರಣ ಸಂಬಂಧ ಶಹಾಪುರ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೇತನ್ ಬಬನ್‌ನಿಂದ ದೂರವಾಗಿದ್ದ ಯುವತಿ ಆಕಾಶ ಜಾಲಗಾರನೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಳು. ಇದೇ ವಿಚಾರವಾಗಿ ಉಂಟಾದ ಮನಸ್ತಾಪ ಬಗೆಹರಿಸಿಕೊಳ್ಳಲು ಎರಡೂ ಗುಂಪುಗಳು ವಡಗಾವಿಯ ಜೈಲ್ ಶಾಲೆ ಮೈದಾನದಲ್ಲಿ ಸೇರಿದ್ದವು. ಮಾತುಕತೆ ವೇಳೆ ಗಲಾಟೆ ಉಂಟಾಗಿ ಕೇತನ್ ಹಾಗೂ ಆತನ ರಕ್ಷಣೆಗೆ ಬಂದ ಸ್ನೇಹಿತರ ಮೇಲೆ ತಲ್ವಾರ್ ಮತ್ತು ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಘಟನೆ ಸಂಬಂಧ ಕೇತನ್ ನೀಡಿದ ದೂರಿನ ಮೇರೆಗೆ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ತರುಣ ಜಾಲಗಾರ, ಪ್ರೇಮ ಜಾಲಗಾರ, ಆದಿತ್ಯ ಪೂಜಾರಿ, ಪ್ರಶಾಂತ ಜಾಲಗಾರ ಹಾಗೂ ಮಾರುತಿ ಮಂಜಾಲಕರ ಎಂಬ ಐವರನ್ನು ಪೊಲೀಸರು ಬಂಧಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

Share News

About BigTv News

Check Also

ಬೆಂಗಳೂರಲ್ಲೂ ಬೈಕ್ ಸವಾರನ ಕುತ್ತಿಗೆ ಸೀಳಿದ ಮಾರಕ ಮಾಂಜಾ ದಾರ

ಬೆಂಗಳೂರು: ನಿಷೇಧಿತ ಚೈನೀಸ್ ಮಾಂಜಾ ದಾರಕ್ಕೆ ಸಿಲುಕಿ ಬೈಕ್ ಸವಾರರೊಬ್ಬರ ಕುತ್ತಿಗೆ ಭೀಕರವಾಗಿ ಸೀಳಿರುವ ಘಟನೆ ಹೆಗಡೆನಗರದ ಫ್ಲೈ ಓವರ್ …

Leave a Reply

Your email address will not be published. Required fields are marked *