ರಾಯಚೂರು: ಸಿಗರೇಟ್ ನೀಡುವ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ನಗರದ ಎಲ್.ಬಿ.ಎಸ್. ಬಡಾವಣೆಯಲ್ಲಿ ನಡೆದಿದೆ. ಅಂಗಡಿ ಮಾಲೀಕ ನರಸಿಂಹಯ್ಯ ಶೆಟ್ಟಿ (40) ಕೊಲೆಯಾದ ವ್ಯಕ್ತಿ. ಆರೋಪಿ ತಿಲಕ್ ಸಿಂಗ್ ಅಂಗಡಿಯಲ್ಲಿ ಮೊದಲು ಸಿಗರೇಟ್ ಕೊಟ್ಟು ಬಳಿಕ ಹಣ ಪಡೆಯುವಂತೆ ಕೇಳಿದ್ದಾನೆ. ಇದಕ್ಕೆ ಮಾಲೀಕ ನಿರಾಕರಿಸಿದ್ದರಿಂದ ಇಬ್ಬರ ನಡುವೆ ಜಗಳ ನಡೆದಿದ್ದು, ಆರೋಪಿ ಬೆದರಿಕೆ ಹಾಕಿ ತೆರಳಿದ್ದನು. ಬಳಿಕ ಅಂಗಡಿ ಸಮೀಪ ಕಸ ಗುಡಿಸುತ್ತಿದ್ದ ನರಸಿಂಹಯ್ಯ ಅವರ ಮೇಲೆ ಮಚ್ಚಿನಿಂದ ದಾಳಿ ನಡೆಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ತಿಲಕ್ ಸಿಂಗ್‌ನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

