Breaking News

ಬೆಂಗಳೂರಲ್ಲಿ ವೇಗವಾಗಿ ಕಾರು ಓಡಿಸಬೇಡಿ ಎಂದು ಬುದ್ಧಿವಾದ ಹೇಳಿದ್ದಕ್ಕೆ, ಯುವಕನ ಮೇಲೆ ಕಾರು ಹತ್ತಿಸಿ ಭೀಕರ ಕೊಲೆ!

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯಲ್ಲಿ ರಸ್ತೆ ಗಲಾಟೆ ಹಿನ್ನೆಲೆಯಲ್ಲಿ ಬಿಹಾರ ಮೂಲದ ರಂಜಿತ್ ಕುಮಾರ್ ಸಾಹು (25) ಎಂಬ ಯುವಕನನ್ನು ಕಾರಿನಿಂದ ಡಿಕ್ಕಿ ಹೊಡೆಸಿ ಕೊಲೆ ಮಾಡಿರುವ ಘಟನೆ ನಡೆದಿದೆ. ಅಕ್ಟೋಬರ್ 21ರ ರಾತ್ರಿ ವೇಗವಾಗಿ ಬಂದ ಕಾರಿಗೆ ನಿಧಾನವಾಗಿ ಚಲಿಸುವಂತೆ ನಿತೀಶ್ ಮುಖಿಯಾ ಸನ್ನೆ ಮಾಡಿದ್ದರಿಂದ ಕೋಪಗೊಂಡ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಬಳಿಕ ನಿತೀಶ್ ಸಹಾಯಕ್ಕೆ ಬಂದ ಸ್ನೇಹಿತ ರಂಜಿತ್ ಮೇಲೆ ಕಾರು ಹರಿಸಿ, ಸುಮಾರು 100 ಮೀಟರ್ ಎಳೆದೊಯ್ದು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಗಂಭೀರ ಗಾಯಗೊಂಡ ರಂಜಿತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ನಿತೀಶ್ ನೀಡಿದ ದೂರಿನ ಮೇರೆಗೆ ಮೂವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

Share News

About BigTv News

Check Also

ಬೆಂಗಳೂರಲ್ಲೂ ಬೈಕ್ ಸವಾರನ ಕುತ್ತಿಗೆ ಸೀಳಿದ ಮಾರಕ ಮಾಂಜಾ ದಾರ

ಬೆಂಗಳೂರು: ನಿಷೇಧಿತ ಚೈನೀಸ್ ಮಾಂಜಾ ದಾರಕ್ಕೆ ಸಿಲುಕಿ ಬೈಕ್ ಸವಾರರೊಬ್ಬರ ಕುತ್ತಿಗೆ ಭೀಕರವಾಗಿ ಸೀಳಿರುವ ಘಟನೆ ಹೆಗಡೆನಗರದ ಫ್ಲೈ ಓವರ್ …

Leave a Reply

Your email address will not be published. Required fields are marked *