ಹುಬ್ಬಳ್ಳಿ: ದೀಪಾವಳಿ ಸಂಭ್ರಮದ ವೇಳೆ ಹಾರಿಬಿಟ್ಟ ಆಕಾಶ ಬುಟ್ಟಿಯಿಂದ ರೈತರೊಬ್ಬರ 7 ಎಕರೆ ಕಬ್ಬಿನ ಬೆಳೆ ಸುಟ್ಟುಹೋಗಿರುವ ಘಟನೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ತಿಮ್ಮಸಾಗರ ಗ್ರಾಮದಲ್ಲಿ ನಡೆದಿದೆ. ಶಂಕರಲಿಂಗ ಎಂಬ ರೈತ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಕಾಶ ಬುಟ್ಟಿಯಲ್ಲಿದ್ದ ದೀಪ ರೈತರ ಕಬ್ಬಿನ ಗದ್ದೆಗೆ ಬಿದ್ದು ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ನಂದಿಸಲು ರೈತರು, ಗ್ರಾಮಸ್ಥರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟರೂ ಕಬ್ಬಿನ ಬೆಳೆ ಸುಟ್ಟುಹೋಗಿದೆ. ಕಟಾವಿಗೆ ಸಿದ್ಧವಾಗಿದ್ದ ಕಬ್ಬಿನಿಂದ ಲಕ್ಷಾಂತರ ರೂಪಾಯಿ ಆದಾಯ ನಿರೀಕ್ಷಿಸಿದ್ದ ರೈತನಿಗೆ ಭಾರಿ ನಷ್ಟವಾಗಿದೆ. ರೈತರ ಬೆಳೆ ಹಾನಿಯಾಗುವುದನ್ನು ತಪ್ಪಿಸಲು ಆಕಾಶ ಬುಟ್ಟಿಗಳನ್ನು ಹಾರಿಸದಂತೆ ರೈತರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
