Breaking News

ತುಂಗಭದ್ರಾ ಜಲಾಶಯ ಅಣೆಕಟ್ಟಿಗೆ ಕ್ರಸ್ಟ್ ಗೇಟ್ ಗಳನ್ನು ಅಳವಡಿಸುವ ಕುರಿತು ಮಾದರಿ ಸಂಗ್ರಹ

ವಿಜಯನಗರ: ತುಂಗಭದ್ರಾ ಅಣೆಕಟ್ಟೆಗೆ ಹೊಸ ಕ್ರಸ್ಟ್‌ ಗೇಟ್‌ಗಳನ್ನು ತುರ್ತಾಗಿ ಅಳವಡಿಸಬೇಕೆ ಅಥವಾ ಬೇಡವೇ ಎಂಬುದನ್ನು ತಿಳಿದುಕೊಳ್ಳಲು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆಯ (ಸಿಎಸ್‌ಐಆರ್‌) ಸ್ಟ್ರಕ್ಚರಲ್‌ ಎಂಜಿನಿಯರಿಂಗ್ ಸಂಶೋಧನಾ ವಿಭಾಗದ ಐವರು ತಜ್ಞರು ಇಲ್ಲಿ ಪರಿಶೀಲಿಸಿದರು.
ಜೆಮ್‌ಶೆಡ್‌ಪುರದ ಮೆಟೀರಿಯಲ್‌ ಎಂಜಿನಿಯರಿಂಗ್ ಪ್ರಯೋಗಾಲಯದ ಹೇಮೇಂದ್ರನಾಥ್‌ ನೇತೃತ್ವದಲ್ಲಿ ಎರಡು ಗಂಟೆ 33 ಗೇಟ್‌ಗಳನ್ನು ಪರಿಶೀಲಿಸಿದ ತಂಡ, ಪ್ರತಿಯೊಂದು ಗೇಟ್‌ನಲ್ಲಿ ಬಳಸಲಾದ ಸಾಮಗ್ರಿಗಳ ಮಾದರಿ ಸಂಗ್ರಹಿಸಿತು.
ಈ ಮಾದರಿಗಳನ್ನು ನಾವು ಕೂಲಂಕಷ ಪರಿಶೀಲನೆಗೆ ಒಳಪಡಿಸಲಿದ್ದೇವೆ. ಗೇಟ್‌ಗಳ ಗುಣಮಟ್ಟ, ಬಾಳಿಕೆ, ತುರ್ತಾಗಿ ಬದಲಿಸುವ ಅಗತ್ಯ ಇದೆಯೇ ಎಂಬುದಕ್ಕೆ ಪರೀಕ್ಷೆಯಿಂದ ಉತ್ತರ ಸಿಗುವ ನಿರೀಕ್ಷೆ ಇದೆ. ನಂತರ ಹೊಸ ಗೇಟ್ ಅಳವಡಿಕೆ ಕುರಿತ ಪ್ರಕ್ರಿಯೆ ಆರಂಭವಾಗಲಿವೆ ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.
ಡಿಸೆಂಬರ್ 8ರಂದು ಅಣೆಕಟ್ಟೆಗೆ ಬಂದಿದ್ದ ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಪ್ರಾಧಿಕಾರದ ತಜ್ಞರು ಅಣೆಕಟ್ಟು ಸಾಮರ್ಥ್ಯ ಪರೀಕ್ಷೆ ನಡೆಸುವಂತೆ ತಿಳಿಸಿದ್ದರು.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *