Breaking News

23 ನಂತ್ರ ಮೋದಿ ‘ಮಹಾನ್ ಫೇಕ್ ಮಹಾರಾಜ’ ಆಗ್ತಾರೆ; ಬಿ.ಕೆ ಹರಿಪ್ರಸಾದ್.

ಹುಬ್ಬಳ್ಳಿ: ಮೇ 23ರ ನಂತರ ಪ್ರಧಾನಿ ಮೋದಿಗೆ ಮಹಾನ್ ಫೇಕ್ ಮಹಾರಾಜ” ಅಂತಾ ಹೆಸರು ಬರಲಿದೆ ಅಂತಾ ಮೋದಿ ವಿರುದ್ಧ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಈಗ ವಿಜ್ಞಾನಿ ಆಗಿದ್ದಾರೆ. ಬಾಲಾಕೋಟ್ ದಾಳಿ ಸಂದರ್ಭದಲ್ಲಿ ಮೋಡದ ವಿಜ್ಞಾನಿ ಆಗಿದ್ದರು. ಹಿಂದೆ ಪ್ಲ್ಯಾಸ್ಟಿಕ್ ಸರ್ಜರಿ ವಿಜ್ಞಾನಿ ಕೂಡ ಆಗಿದ್ರು. ಅವರ ಗ್ರಾಜ್ಯುವೆಟ್ ಫೇಕ್, ಅವರು ಕೊಟ್ಟ ಕಾರ್ಯಕ್ರಮಗಳು ಕೂಡ ಫೇಕ್. ಮೊದಲು ಪ್ರಧಾನ ಸೇವಕ ಅಂದ್ರು, ಆ ಬಳಿಕ ಚೌಕಿದಾರ ಅಂದ್ರು. ಆದ್ರೆ ಮೇ 23ರ ಬಳಿಕ ಅವರಿಗೆ “ಮಹಾನ ಫೇಕ್ ಮಹಾರಾಜ್” ಅಂತಾ ಹೊಸ ಹೆಸರು ಬರುತ್ತದೆ ಎಂದು ಕುಹಕವಾಡಿದ್ರು.ಇನ್ನು, ಕಾಂಗ್ರೆಸ್ ಮುಖಂಡರುಗಳಿರುವ ಹೋಟೆಲ್‌ಗಳ ಮೇಲೆ ನಡೆದ ದಾಳಿ ವಿಚಾರವಾಗಿ , ಐಟಿ, ಸಿಬಿಐದಂತಹ ಪಕ್ಷಗಳ ಸಮ್ಮಿಶ್ರ ಸರ್ಕಾರವೇ ಎನ್.ಡಿ.ಎ. ಆಗಿ ಹೋಗಿದೆ. ಐಟಿ ಮತ್ತು‌ ಇಡಿಯನ್ನು ರಾಜಕೀಯ ದಾಳಕ್ಕಾಗಿ ಕೇಂದ್ರ ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಜನರನ್ನು ಭಯ ಬೀಳಿಸುವುದಕ್ಕಾಗಿ ದಾಳಿ ಮಾಡಲಾಗುತ್ತಿದೆ ಎಂದರು. ಹುಬ್ಬಳ್ಳಿ ಹೋಟೆಲ್‌ ದಾಳಿಯಲ್ಲಿ ಶಿವಳ್ಳಿ ಫೋಟೋ ಸಿಕ್ಕಿರುವ ವಿಚಾರವಾಗಿ, ಅದಾವುದು ನಮ್ಮದಲ್ಲ. ಅವರೇ‌ ಇಟ್ಟು ಹಾಗೇ ಮಾಡಿಸಿರಬಹುದು. ಸರ್ಕಾರದ‌ ಭವಿಷ್ಯ ರಾಹುಲ್ ಗಾಂಧಿ ಮತ್ತು ದೇವೇಗೌಡರ ನಿರ್ಣಯದ ‌ಮೇಲಿದೆ. ಅವರನ್ನು ಬಿಟ್ಟು ಉಳಿದವರೆಲ್ಲರ ಮಾತುಗಳು ಕೇವಲ‌ ರಾಜಕೀಯ ಪ್ರೇರಿತ ಹೇಳಿಕೆಗಳು ಮಾತ್ರ ಅಂತಾ ಸಮಜಾಯಿಷಿ ನೀಡಿದ್ದಾರೆ.ಹಾಗೇ ರಮೇಶ ಜಾರಕಿಹೊಳಿ ಇನ್ನು ಸಹ ಪಕ್ಷದಲ್ಲಿ ಇದಾರೆ. ರಮೇಶ ಜಾರಕಿಹೊಳಿ‌ ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಅವರು ನಮ್ಮ ಪಕ್ಷದಲ್ಲೇ ಇರ್ತಾರೆ, ಬೇರೆ ಎಲ್ಲಿಯೂ‌ ಹೋಗಿಲ್ಲ ಎಂದರು

Share News

About admin

Check Also

ಗಸ್ತು ಪೊಲೀಸರ ಮೇಲೆ ದಾಳಿ: ಕಾನೂನಿಗೆ ಸವಾಲು ಹಾಕಿದ ದುಷ್ಕರ್ಮಿಗಳು!

ಪೊಲೀಸರೇ ಸುರಕ್ಷಿತ ಅಲ್ಲವಾ..? ಹುಬ್ಬಳ್ಳಿಯಲ್ಲಿ ಗೂಂಡಾಗಿರಿ ಮಿತಿ ಮೀರಿ! ಸ್ಮಶಾನದಲ್ಲೇ ದಾಳಿ: ಪೊಲೀಸರ ಮೇಲೆ ಚಾಕು ನಗರದಲ್ಲಿ ಭೀತಿ! ಕರ್ತವ್ಯದಲ್ಲಿದ್ದ …

Leave a Reply

Your email address will not be published. Required fields are marked *