Breaking News

ಮಂಗಳೂರು: ನಕಲಿ ಟ್ರಾಫಿಕ್ ಚಲನ್ ಎಪಿಕೆ ಲಿಂಕ್ ಕಳುಹಿಸಿ ಟ್ರಕ್ ಚಾಲಕನ ಖಾತೆಯಿಂದ ₹4.26 ಲಕ್ಷ ಲಪಟಾಯಿಸಿದ ಸೈಬರ್ ವಂಚಕರು

ಬೆಂಗಳೂರು, ನವೆಂಬರ್ 13: ಟ್ರಾಫಿಕ್ ದಂಡದ ಹೆಸರಿನಲ್ಲಿ ನಕಲಿ ಲಿಂಕ್ ಕಳುಹಿಸಿ, ಎಪಿಕೆ ಆಯಪ್ ಡೌನ್‌ಲೋಡ್ ಮಾಡಿಸಿಕೊಂಡು ಟ್ರಕ್ ಚಾಲಕರೊಬ್ಬರಿಗೆ ಸೈಬರ್ ವಂಚಕರು ₹4.26 ಲಕ್ಷ ವಂಚಿಸಿರುವ ಘಟನೆ ನಡೆದಿದೆ. ಅಕ್ಟೋಬರ್ 31ರಂದು ಚಾಲಕನ ಮೊಬೈಲ್‌ಗೆ ಬಂದಿದ್ದ ಟ್ರಾಫಿಕ್ ದಂಡದ ಸಂದೇಶದಲ್ಲಿನ ಲಿಂಕ್ ಕ್ಲಿಕ್ ಮಾಡಿದ್ದರಿಂದ ನಕಲಿ ಆಯಪ್ ಡೌನ್‌ಲೋಡ್ ಆಗಿತ್ತು. ಇದರಿಂದ ಮೊಬೈಲ್ ಹ್ಯಾಕ್ ಮಾಡಿದ ವಂಚಕರು ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿಕೊಂಡಿದ್ದಾರೆ. ನವೆಂಬರ್ 10ರಂದು ಖಾತೆಯಿಂದ ₹4,26,434 ಹಣ ಕಡಿತವಾಗಿರುವುದು ತಿಳಿದು ಚಾಲಕ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಕುಡಿದ ಮತ್ತಿನಲ್ಲಿ ಬೈದಿದ್ದಕ್ಕೆ ತೋಟದ ಕಾವಲುಗಾರನ ಕೊಲೆ ಪ್ರಕರಣ: ಕೊನೆಗೂ ಸಿಕ್ಕಿಬಿದ್ದ ಆರೋಪಿ

ಚಿಕ್ಕಮಗಳೂರು: ಕಡೂರು ತಾಲೂಕಿನ ಕರಿಚಿರನಹಳ್ಳಿ ಸಮೀಪದ ಅಡಿಕೆ ತೋಟದ ಮನೆಯಲ್ಲಿ ಕಾವಲುಗಾರನನ್ನು ಕೊಲೆ ಮಾಡಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ನವೀನ್ …

Leave a Reply

Your email address will not be published. Required fields are marked *