Breaking News

ಕೊಡಗಿಯಲ್ಲಿ ಸೂಟ್‌ಕೇಸ್‌ ಒಳಗೆ 8 ತಿಂಗಳ ಮಗುವನ್ನಿಟ್ಟು ಪರಾರಿಯಾದ ತಾಯಿ!

ಕೊಡಗು: 8 ತಿಂಗಳ ಮಗುವನ್ನು ಸೂಟ್‌ಕೇಸ್‌ನಲ್ಲಿ ಹಾಕಿ ತಾಯಿ ಪರಾರಿಯಾಗಿರುವ ಘಟನೆ ಸೋಮವಾರಪೇಟೆ ತಾಲೂಕಿನ ಜಂಬೂರು ಗ್ರಾಮದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಬಡಾವಣೆಯಲ್ಲಿ ನಡೆದಿದೆ. ಸ್ಥಳೀಯರ ಸಮಯಪ್ರಜ್ಞೆಯಿಂದ ಮಗು ಪ್ರಾಣಾಪಾಯದಿಂದ ಪಾರಾಗಿದೆ. ನವೆಂಬರ್ 11ರ ರಾತ್ರಿ ಮನೆಯಿಂದ ಮಗುವಿನ ಅಳುವಿನ ಶಬ್ದ ಕೇಳಿದ ಸ್ಥಳೀಯರು ಪರಿಶೀಲಿಸಿದಾಗ ತಾಯಿ ನಾಪತ್ತೆಯಾಗಿರುವುದು ತಿಳಿದುಬಂದಿದೆ. ಬಳಿಕ ಮಗುವಿನ ಅಜ್ಜಿಗೆ ಮಾಹಿತಿ ನೀಡಿ, ಮನೆ ಬೀಗ ಒಡೆದು ನೋಡಿದಾಗ ಸೂಟ್‌ಕೇಸ್‌ನಲ್ಲಿ ಮಗು ಅಳುತ್ತಿರುವುದು ಪತ್ತೆಯಾಗಿದೆ. ತಕ್ಷಣ ಮಗುವನ್ನು ರಕ್ಷಿಸಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಗು ಚೇತರಿಸಿಕೊಂಡಿದ್ದು, ಅಜ್ಜಿಯ ಆರೈಕೆಯಲ್ಲಿದೆ. ಪರಾರಿಯಾಗಿದ್ದ ತಾಯಿಯನ್ನು ಹುಣಸೂರು ಬಳಿ ಪತ್ತೆಹಚ್ಚಲಾಗಿದೆ. ಮಗುವನ್ನು ಸೂಟ್‌ಕೇಸ್‌ನಲ್ಲಿ ಹಾಕಿ ಹೋಗಲು ಕಾರಣವೇನು ಎಂಬುದು ನಿಗೂಢವಾಗಿದ್ದು, ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share News

About BigTv News

Check Also

ಬೆಂಗಳೂರು | ವಕೀಲ ಮಂಜುನಾಥ್ ಹತ್ಯೆ ಪ್ರಕರಣ: ಶೂಟರ್‌ಗೆ ಶೋಧ

ಬೆಂಗಳೂರು: ಪಟ್ಟಂದೂರು ಅಗ್ರಹಾರದಲ್ಲಿ ವಕೀಲ ಮಂಜುನಾಥ್ ಅವರನ್ನು ಗುಂಡಿಟ್ಟು ಕೊಲೆ ಮಾಡಿದ ಪ್ರಕರಣದಲ್ಲಿ ಬಿಹಾರ ಮೂಲದ ಆರೋಪಿ ಅಮಿತ್ ಕುಮಾರ್ …

Leave a Reply

Your email address will not be published. Required fields are marked *