Breaking News

ಕಡಬದ ವ್ಯಾಪಾರಿಗೆ ಹಣಕ್ಕೆ ಬೇಡಿಕೆ, ಜೀವ ಬೆದರಿಕೆ

ಕಡಬ: ಹಣಕ್ಕೆ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿದ ಆರೋಪದಡಿ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಟ್ರುಪ್ಪಾಡಿ ಗ್ರಾಮದ ಕೆ.ಎಂ. ಮ್ಯಾಥ್ಯೂ ಅವರಿಗೆ ಕೋಡಿಂಬಾಳದ ಅನೀಸ್ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟು, ಕಡಬ ಪೇಟೆಗೆ ಬರುವಂತೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಅದರಂತೆ ಪುತ್ರ ರಕ್ಷಿತ್ ಮಾಣಿ ಜೊತೆ ಕಡಬ ಪೇಟೆಗೆ ಬಂದಾಗ, ಕಾರಿನಲ್ಲಿ ಬಂದ ವಿಕ್ಟರ್ ಮಾರ್ಟಿಸ್ ಮತ್ತು ಅನೀಸ್ ಹಲ್ಲೆಗೆ ಮುಂದಾಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಘಟನೆ ಕಾರಿನ ಸಿಸಿ ಕ್ಯಾಮರಾ ಹಾಗೂ ಸಮೀಪದ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎನ್ನಲಾಗಿದ್ದು, ಈ ಸಂಬಂಧ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share News

About BigTv News

Check Also

ಕುಡಿದ ಮತ್ತಿನಲ್ಲಿ ಬೈದಿದ್ದಕ್ಕೆ ತೋಟದ ಕಾವಲುಗಾರನ ಕೊಲೆ ಪ್ರಕರಣ: ಕೊನೆಗೂ ಸಿಕ್ಕಿಬಿದ್ದ ಆರೋಪಿ

ಚಿಕ್ಕಮಗಳೂರು: ಕಡೂರು ತಾಲೂಕಿನ ಕರಿಚಿರನಹಳ್ಳಿ ಸಮೀಪದ ಅಡಿಕೆ ತೋಟದ ಮನೆಯಲ್ಲಿ ಕಾವಲುಗಾರನನ್ನು ಕೊಲೆ ಮಾಡಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ನವೀನ್ …

Leave a Reply

Your email address will not be published. Required fields are marked *