Breaking News

ನಂದಿನಿ ಮೊಸರಿನ ಪ್ಯಾಕೇಟ್‌ನಲ್ಲಿ ಸಿಮ್‌ ಕಾರ್ಡ್‌ ಪತ್ತೆ: ಅಸಲಿಯತ್ತು ಬಯಲಿಗೆ, ವ್ಯಕ್ತಿ ಅರೆಸ್ಟ್‌

ಮಂಡ್ಯ: ನಂದಿನಿ ಮೊಸರಿನ ಪ್ಯಾಕೇಟ್‌ನಲ್ಲಿ ಜಿಯೋ ಸಿಮ್ ಕಾರ್ಡ್ ಪತ್ತೆಯಾಗಿದೆ ಎಂದು ಸುಳ್ಳು ವಿಡಿಯೋ ಹರಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮದ್ದೂರಿನ ಅರುಣ್ ಕುಮಾರ್ ಎಂಬಾತನೇ ಬಂಧಿತ ಆರೋಪಿ. ಅರುಣ್ ಕುಮಾರ್ ಮೊಸರಿನ ಪ್ಯಾಕೇಟ್‌ನಲ್ಲಿ ಸಿಮ್ ಕಾರ್ಡ್ ಸಿಕ್ಕಿದೆ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಇದರಿಂದ ನಂದಿನಿ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡಿತ್ತು. ಈ ಕುರಿತು ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಅಧಿಕಾರಿಗಳು ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿದಾಗ ಸಿಮ್ ಕಾರ್ಡ್ ಅರುಣ್ ಕುಮಾರ್ ಅವರ ಬಾಮೈದನ ಹೆಸರಿನಲ್ಲಿ ನೋಂದಣಿಯಾಗಿರುವುದು ಪತ್ತೆಯಾಗಿದೆ. ವಿಚಾರಣೆ ವೇಳೆ ತಾನೇ ಸಿಮ್ ಕಾರ್ಡ್ ಹಾಕಿ ಸುಳ್ಳು ವಿಡಿಯೋ ಮಾಡಿದ್ದಾಗಿ ಅರುಣ್ ಒಪ್ಪಿಕೊಂಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

Share News

About BigTv News

Check Also

ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು

ಮೈಸೂರು: ಕೇರಳದಲ್ಲಿ ಪ್ರಗತಿಪರ ಯುವ ರೈತ ಪ್ರಶಸ್ತಿ ಪಡೆದಿದ್ದ 31 ವರ್ಷದ ಧನೇಶ್ ಎಸ್. ನಾಯರ್ ಅಲಿಯಾಸ್ ಡ್ಯಾನಿ, ಮೈಸೂರಿನ …

Leave a Reply

Your email address will not be published. Required fields are marked *