Breaking News

ಅಮಾಯಕನ ಹೆಸರಲ್ಲಿ 350 ಕೋಟಿ ರೂ. ಜಿಎಸ್‌ಟಿ ವಹಿವಾಟು! ತಿಂಗಳಿಗೆ 15 ಸಾವಿರ ಸಂಬಳ ಪಡೆಯುವ ಯುವಕನ ದಾಖಲೆ ದುರ್ಬಳಕೆ

ಬಳ್ಳಾರಿ: ತಿಂಗಳಿಗೆ ₹15 ಸಾವಿರ ಸಂಬಳ ಪಡೆಯುವ ಟೊಯೊಟಾ ಶೋರೂಂ ಉದ್ಯೋಗಿ ರೋಷನ್ ಜಮೀಲ್ ಹೆಸರಿನಲ್ಲಿ ಐದು ತಿಂಗಳಲ್ಲಿ ₹350 ಕೋಟಿ ಜಿಎಸ್‌ಟಿ ವಹಿವಾಟು ನಡೆದಿರುವುದು ಬೆಳಕಿಗೆ ಬಂದಿದೆ. ಅವರ ಆಧಾರ್, ಪ್ಯಾನ್ ಹಾಗೂ ಬ್ಯಾಂಕ್ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ವಂಚನೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ರೋಷನ್ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಪ್ಲಾಸ್ಟಿಕ್ ವ್ಯಾಪಾರಕ್ಕಾಗಿ ಜಿಎಸ್‌ಟಿ ನೋಂದಣಿ ಮಾಡಿಸಿ ಈ ವಹಿವಾಟು ನಡೆಸಲಾಗಿದೆ ಎನ್ನಲಾಗಿದೆ. ಜಿಎಸ್‌ಟಿ ಅಧಿಕಾರಿಗಳು ಮನೆಗೆ ಭೇಟಿ ನೀಡಿದಾಗ ಕುಟುಂಬಕ್ಕೆ ವಂಚನೆಯ ವಿಚಾರ ತಿಳಿದುಬಂದಿದೆ. ಈ ಸಂಬಂಧ ರೋಷನ್ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದು, ವಂಚನೆಯ ಹಿಂದಿರುವವರ ಪತ್ತೆಗೆ ಮುಂದಾಗಿದ್ದಾರೆ.

Share News

About BigTv News

Check Also

ಮುಂಡಗೋಡು: ಬಾಲಕಿ ಮೇಲಿನ ದೌರ್ಜನ್ಯ ಖಂಡಿಸಿ ಮುಸ್ಲಿಂ ಸಮಾಜದಿಂದ ಪ್ರತಿಭಟನೆ

ಮುಂಡಗೋಡ ತಾಲೂಕಿನಲ್ಲಿ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಖಂಡಿಸಿ, ಮುಸ್ಲಿಂ ಸಮಾಜ ಹಾಗೂ ಅಹ್ಲ್ ಎ ಸುನ್ನತ್ ಜಮಾತ್ …

Leave a Reply

Your email address will not be published. Required fields are marked *