ಹುಬ್ಬಳ್ಳಿ ಕಸಬಾ ಪೋಲಿಸ್ ಠಾಣೆಯ ಪೋಲಿಸ್ ಮಹತ್ವರ ಕಾರ್ಯಾಚರಣೆ ಕಳ್ಳತನ ಮಾಡಿದ ಒಬ್ಬ ಕಳ್ಳರ ಬಂಧನ ಮಾಡುವ ಮೂಲಕ ತಮ್ಮ ಕಾರ್ಯದಲ್ಲಿ ಚುರುಕುತನವನ್ನು ಹೆಚ್ಚಿಸಿ ಕೊಂಡಿದ್ದಾರೆ. ಹುಬ್ಬಳ್ಳಿ ನೇಕಾರ ನಗರದ ಆದರ್ಶ ಕಾಲೂನಿಯಲ್ಲಿ ನಿವಾಸಿ ಈಶ್ವರ ಬೇನಾಳ ಅವರ ಮನೆಯಲ್ಲಿ ನಡೆದ ಕಳ್ಳತನವನ್ನು ಕೇವಲ 24 ಗಂಟೆಯಲ್ಲಿ ಕಳ್ಳನ ಹಿಡಿಯುವ ಮೂಲಕ ಯಶಸ್ವಿಯಾಗಿದ್ದಾರೆ. ಒಟ್ಟು 183.ಗ್ರಾಂ 5.ಮಿಲಿ ಅಂದಾಜು 7.34.000 ಸಾವಿರ ರೂಪಾಯಿ ಬೆಲೆ ಬಾಳುವ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಕಸಬಾ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಇದಾಗಿದ್ದು,
ದಿನಾಂಕ 19 -6-2023 ರಂದು ಪ್ರಕರಣ ದಾಖಲಾಗಿತ್ತು , ಅಂದಿನಿಂದ ಕಾರ್ಯಕ್ಕೆ ಇಳಿದ ಇನ್ಸ್‌ಪೆಕ್ಟರ್ ರಾಘವೇಂದ್ರ ಹಳ್ಳರೂ ಮತ್ತು ಅವರ ತಂಡ ಕಳ್ಳನ ಎಡೆಮುರಿ ಕಟ್ಟಿದೆ.
ಹುಬ್ಬಳ್ಳಿ – ಧಾರವಾಡ. ಪೋಲಿಸ್ ಆಯುಕ್ತರು ,ಹಾಗೂ ಹುಬ್ಬಳ್ಳಿ – ಧಾರವಾಡ ಉಪಪೋಲಿಸ್ ಆಯುಕ್ತರು , ಹಾಗೂ ಶಹರ ದಕ್ಷಿಣ ವಿಭಾಗ ಪೋಲಿಸ್ ಠಾಣೆ ಅಧಿಕಾರಿಗಳು ದಕ್ಷತೆಯಿಂದ ಕಳ್ಳತನ ಮಾಡಿದ ಆರೋಪಿಯನ್ನು ಕೇವಲ 24 ಗಂಟೆಗಳಲ್ಲಿ ಬಂಧಿಸಿ ಪ್ರಕರಣ ಬೇದಿಸುವಲ್ಲಿ ಕಸಭಾ ಪೋಲಿಸ್ ಠಾಣೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ,
ಕಸಾಭಾ ಪೇಟೆ ಪೋಲಿಸ್ ಠಾಣೆಯ ಅಧಿಕಾರಿಗಳಾದ ರಾಘವೇಂದ್ರ ಹಳ್ಳೂರು ಹಾಗೂ ಎಂ.ವಾಯ್ .ಆಲಮಟ್ಟಿ ಅವರ ತಂಡದ ಈ ಕಾರ್ಯಕ್ಕೆ ಹುಬ್ಬಳ್ಳಿ – ಧಾರವಾಡ ಪೋಲಿಸ್ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಬಂಧನಕ್ಕೆ ಒಳಗಾದ ಆರೋಪಿ ವಿರುದ್ಧ ಐ.ಪಿ.ಸಿ.ಕಲಂ 454, 380 , ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





