ಹುಬ್ಬಳ್ಳಿ: ಬಿಜೆಪಿಯವರು ನಮ್ಮ ಸ್ನೇಹಿತರು. ನಾವು ಅವರನ್ನ, ಅವರು ನಮ್ಮನ್ನ ಗೌರವಿಸಬೇಕು. ಮಾನವತಾವಾದಿ ಆ ಪುಣ್ಯಾತ್ಮ ಬಸವಣ್ಣನವರಿಗೆ ಬೈದು ನಿಮಗೆ ಏನು ಅನುಕೂಲ ಆಗುತ್ತೆ?. ಅನುಕೂಲ ಆಗೋದಾದ್ರೆ ದೇವರು ನಿಮಗೆ ಒಳ್ಳೇದು ಮಾಡ್ಲಿ ಎಂದು ಸಚಿವ ಸಂತೋಷ್ ಲಾಡ್ ವ್ಯಂಗ್ಯವಾಡಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಮುಸಲ್ಮಾನರು ನಮ್ಮ ಬ್ರದರ್ಸ್ ಅಂತ ಡಿ.ಕೆ ಶಿವಕುಮಾರ್ ಹೇಳಿದ್ದು, ಕುಕ್ಕರ್‌ನಲ್ಲಿ ಬಾಂಬ್ ಇಟ್ಟವರನ್ನಲ್ಲ ಎಂದರು.
ಬಿಜೆಪಿ ಸರ್ಕಾರದಲ್ಲಿ ಮುಸ್ಲಿಂ ಸಚಿವರು ಇರಲಿಲ್ವಾ..? ಇವರು ಮುಸ್ಲಿಂ ವಿರುದ್ಧ ಮಾತನಾಡಿ ಹಿಂದೂಗಳ ವೋಟ್ ಪಡೀತಾರೆ. ಇವರು 10 ವರ್ಷದ ಮೇಲಾಯ್ತು ಅಧಿಕಾರಕ್ಕೆ ಬಂದು ಹಿಂದೂ ಪ್ಯಾಕೇಜ್ ಸಪರೇಟ್ ಮಾಡಿದ್ದಾರಾ? ನಿಮ್ಮ ಊರಲ್ಲಿನ ಬಡವರು ಕುದುರೆ ಮೇಲೆ ಓಡಾಡ್ತಾರಾ? ಎಂದು ಲೇವಡಿ ಮಾಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





