ಧಾರವಾಡ : ಮೇಕ್ಕಾಗೆ ಉಮ್ರಾಗೆ ಹೋಗಿದ್ದ ಯಾತ್ರಾರ್ಥಿ ಬೆಳಿಗ್ಗೆ ಹೃದಯಾಘಾತದಿಂದ ಸೌದಿಯ ಮೇಕ್ಕಾದಲ್ಲಿ ನಿಧನ ಹೊಂದಿದ್ದಾರೆ.

ಧಾರವಾಡ ಜಿಲ್ಲೆಯ ವರವ ನಾಗಲಾವಿಯ ಸೈಯ್ಯದ ದಾದಾಪೀರ ಪೀರಜಾದೆ (70) ಎಂದು ತಿಳಿದು ಬಂದಿದೆ. ಕಳೆದ ಅಕ್ಟೋಬರ್ 9 ರಂದು ಧಾರವಾಡದಿಂದ ಉಮ್ರಾಗಾಗಿ ಸೌದಿಗೆ ಪೀರಜಾದೆ ಹೋಗಿದ್ದರು. ನಾಗಲಾವಿ ಗ್ರಾಮದಲ್ಲಿ ಇರುವ ಶರೀಫ್ ಸಜ್ಜಾದ ದರ್ಗಾದ ದಾದಾಪೀರ ಪೀರಜಾದೆ ಗುರುಗಳು ಆಗಿದ್ದರು. ಇವರ ಜೊತೆಯಲ್ಲಿ ಕುಟುಂಬದ ಕೆಲ ಸದಸ್ಯರು ಕೂಡಾ ಹೋಗಿದ್ದರು. ಪೀರಜಾದೆ ಅವರ ಅಂತ್ಯಕ್ರಿಯೆ ಮೆಕ್ಕಾದಲ್ಲೇ ಕುಟುಂಬದವರು ಮಾಡಲಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

