Breaking News

ಕೊಲೆಯಾದ ಮಹಿಳೆ ಜೀವಂತ ಪತ್ತೆ- ಅಮಾಯಕನಿಗೆ ಚಿತ್ರಹಿಂಸೆ ನೀಡಿ ಎರಡು ವರ್ಷ ಜೈಲಲ್ಲಿಟ್ಟಿದ್ದ ಪೊಲೀಸರು!

ಮಂಡ್ಯ: ನಾಪತ್ತೆಯಾಗಿದ್ದ ಮಹಿಳೆಯನ್ನು ಕೊಲೆ ಮಾಡಲಾಗಿದೆ ಎಂದು ಸುಳ್ಳು ಪ್ರಕರಣ ಸೃಷ್ಟಿಸಿ, ಅಮಾಯಕ ಯುವಕನೊಬ್ಬನನ್ನು ಎರಡೂವರೆ ವರ್ಷ ಜೈಲಿನಲ್ಲಿಟ್ಟ ಘಟನೆ ಪಾಂಡವಪುರದಲ್ಲಿ ಬೆಳಕಿಗೆ ಬಂದಿದೆ. 2019ರಲ್ಲಿ ನಾಪತ್ತೆಯಾಗಿದ್ದ ಮಂಜು ಎಂಬ ಮಹಿಳೆಯ ಪ್ರಕರಣವನ್ನು 2021ರಲ್ಲಿ ಇನ್‌ಸ್ಪೆಕ್ಟರ್ ಪ್ರಭಾಕರ್ ಕೊಲೆ ಪ್ರಕರಣವಾಗಿ ಬದಲಾಯಿಸಿ ರಾಜೇಶ್ ಎಂಬ ಯುವಕನನ್ನು ಬಂಧಿಸಿದ್ದರು. ವಿಚಾರಣೆ ವೇಳೆ ರಾಜೇಶ್‌ಗೆ ಹಲ್ಲೆ ನಡೆಸಿ, ವಿದ್ಯುತ್ ಶಾಕ್ ನೀಡಿ ಬಲವಂತವಾಗಿ ತಪ್ಪೊಪ್ಪಿಗೆ ಹೇಳಿಕೆ ಪಡೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಕೊಲೆ ಆರೋಪದಡಿ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು. ಇದೀಗ ಕೊಲೆಯಾಗಿದ್ದಾಳೆ ಎನ್ನಲಾಗಿದ್ದ ಮಂಜು ಜೀವಂತವಾಗಿ ಪತ್ತೆಯಾಗಿದ್ದು, ಪೊಲೀಸರ ಕಟ್ಟುಕಥೆ ಬಯಲಾಗಿದೆ. ಅಮಾಯಕನ ಬದುಕು ಹಾಳು ಮಾಡಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂಬ ಆಗ್ರಹ ಕೇಳಿಬಂದಿದೆ.

Share News

About BigTv News

Check Also

ವಸತಿ ಶಾಲೆಯ ಊಟದಲ್ಲಿ ರಾಶಿ ರಾಶಿ ಹುಳುಗಳು ಪತ್ತೆ: ವಿದ್ಯಾರ್ಥಿಗಳ ಆಕ್ರೋಶ

ಆನೇಕಲ್: ಬೆಂಗಳೂರು ಹೊರವಲಯದ ತೆಲಗರಹಳ್ಳಿ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡಿದ ಊಟದಲ್ಲಿ ರಾಶಿ ರಾಶಿ …

Leave a Reply

Your email address will not be published. Required fields are marked *