Breaking News

ರಾಜ್ಯದ ಬುಡಕಟ್ಟು ಸಮುದಾಯದ 95 ಜನರಿಗೆ ವಿದೇಶದಲ್ಲಿ ವ್ಯಾಪಾರದ ಆಸೆ ತೋರಿಸಿ ವಂಚನೆ!

ಶಿವಮೊಗ್ಗ : ವಿದೇಶದಲ್ಲಿ ವ್ಯಾಪಾರದ ಅವಕಾಶವಿದೆ ಎಂದು ನಂಬಿಸಿ ಏಜೆಂಟರು ಕಳುಹಿಸಿದ್ದ ಕರ್ನಾಟಕದ 95 ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದವರು ಆಫ್ರಿಕಾದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಬಂಧನಕ್ಕೊಳಗಾಗಿದ್ದಾರೆ. ಪ್ರವಾಸಿ ವೀಸಾದಲ್ಲಿ ವ್ಯಾಪಾರ ಹಾಗೂ ನಕಲಿ ದಾಖಲೆ ಬಳಕೆ ಆರೋಪದ ಮೇಲೆ ಬಂಧಿಸಲಾಗಿದೆ. ಬಂಧಿತರಲ್ಲಿ ಶಿವಮೊಗ್ಗದ 70 ಮಂದಿ ಹಾಗೂ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ 25 ಮಂದಿ ಸೇರಿದ್ದಾರೆ. ವಿದೇಶಕ್ಕೆ ಕಳುಹಿಸುವುದಾಗಿ ಹೇಳಿ ಏಜೆಂಟರು ತಲಾ ₹5 ಲಕ್ಷ ಪಡೆದು ವಂಚಿಸಿರುವ ಆರೋಪ ಕೇಳಿಬಂದಿದೆ. ಕಾಂಗೋದಲ್ಲಿರುವ ಇನ್ನೂ 200ಕ್ಕೂ ಹೆಚ್ಚು ಕನ್ನಡಿಗರಿಗೆ ಬಂಧನದ ಭೀತಿ ಎದುರಾಗಿದೆ. ಸಿಲುಕಿರುವವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಸರ್ಕಾರ ಕ್ರಮ ಕೈಗೊಳ್ಳಬೇಕು ಹಾಗೂ ವಂಚಕ ಏಜೆಂಟರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

Share News

About BigTv News

Check Also

ವಸತಿ ಶಾಲೆಯ ಊಟದಲ್ಲಿ ರಾಶಿ ರಾಶಿ ಹುಳುಗಳು ಪತ್ತೆ: ವಿದ್ಯಾರ್ಥಿಗಳ ಆಕ್ರೋಶ

ಆನೇಕಲ್: ಬೆಂಗಳೂರು ಹೊರವಲಯದ ತೆಲಗರಹಳ್ಳಿ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡಿದ ಊಟದಲ್ಲಿ ರಾಶಿ ರಾಶಿ …

Leave a Reply

Your email address will not be published. Required fields are marked *