Breaking News

3 ದಶಕಗಳ ನಂತರ ಕಾಂಗ್ರೆಸ್ ನ ಪಠಾಣ್ ಮೊದಲ ಬಾರಿಗೆ ವಿಧಾನಸೌಧ ಪ್ರವೇಶಿಸಲು ಸಜ್ಜು

ಹಾವೇರಿ : ಸಂಸದ ಬಸವರಾಜ ಬೊಮ್ಮಾಯಿ ಅವರ ರಾಜಿನಾಮೆಯಿಂದ ತೆರವಾದ ಶಿಗ್ಗಾವಿ ವಿಧಾನಸಭೆಯ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಯಾಸೀರ್​​​​​ ಖಾನ್ ಪಠಾಣ್ ಗೆದ್ದು ಶಾಸಕಸ್ತಾನಕ್ಕೇರಿದ್ದಾರೆ. ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದು, ಈ ಮೂಲಕ ಮೊದಲ ಬಾರಿಗೆ ವಿಧಾನಸೌಧ ಪ್ರವೇಶಿಸಲು ಸಜ್ಜಾಗಿದ್ದಾರೆ.
ಇಂದು ಬೆಳಗಾವಿಯಲ್ಲಿ ಪ್ರಾರಂಭವಾಗಲಿರುವ ಅಧಿವೇಶನದಲ್ಲಿ ಶಾಸಕ ಪಠಾಣ್​ ಅವರು ಮೊದಲ ಬಾರಿಗೆ ಸದನಕ್ಕೆ ಕಾಲಿಡಲಿದ್ದಾರೆ. ಶಿಗ್ಗಾಂವಿಯಲ್ಲಿ 1994ರಲ್ಲಿ ಕೊನೆ ಬಾರಿ ಗೆಲುವು ಕಂಡಿದ್ದ ಕಾಂಗ್ರೆಸ್, 3 ದಶಕದ ಬಳಿಕ ಈ ಬಾರಿ ಜಯಭೇರಿ ಬಾರಿಸಿತು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಈವರೆಗೂ ಈ ಕ್ಷೇತ್ರದಲ್ಲಿ ಸತತ 4 ಬಾರಿ ಗೆಲು ಕಂಡಿದ್ದರು.
2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ವಿರುದ್ಧ ಸೋಲುಂಡಿದ್ದ ಪಠಾಣ್,​ ಈ ಬಾರಿಯ ಉಪಸಮರದಲ್ಲಿ ಭರತ್​ ಬೊಮ್ಮಾಯಿ ವಿರುದ್ಧ ಗೆದ್ದು ಸೇಡು ತೀರಿಸಿಕೊಂಡಿದ್ದಾರೆ. ಭರತ್​ ಬೊಮ್ಮಾಯಿ ಅವರನ್ನು 13,448 ಮತಗಳ ಅಂತರದಿಂದ ಸೋಲಿಸಿದರು. ಒಟ್ಟಾರೆ ಯಾಸೀರ್​ ಖಾನ್ ಪಠಾಣ್ 1,00,756 ಮತ ಪಡೆದಿದ್ದು, ಭರತ್​ ಬೊಮ್ಮಾಯಿ 87,308 ಮತ ಪಡೆದಿದ್ದಾರೆ.
ಬಿಜೆಪಿ ನಂಬಿಕೊಂಡಿದ್ದ ಲಿಂಗಾಯತ ಮತದಾರಲ್ಲಿ ಅಲ್ಪ ಮತದಾರರು‌ ಕಾಂಗ್ರೆಸ್​​​​ ಪರ ಮತ ಚಲಾಯಿಸಿದ್ದು. ಕಾಂಗ್ರೆಸ್ ಪಾಳಯ ಶಿಗ್ಗಾಂವಿಯಲ್ಲಿಯೇ ಬೀಡು ಬಿಟ್ಟು ಭರ್ಜರಿ ಪ್ರಚಾರ ಮಾಡಿದ್ದು ಪಠಾಣ್​ಗೆ ವರವಾಯಿತು. ತನಗೆ ಟಿಕೆಟ್ ಬೇಕು ಎಂದು ಬಂಡಾಯವೆದ್ದಿ ಕಾಂಗ್ರೆಸ್​​​ನ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಅವರನ್ನು ಕೈಪಡೆ ಮನವೊಲಿಸಿ ಚುನಾವಣೆ ಎದುರಿಸಿದ ಹಿನ್ನೆಲೆಯಲ್ಲಿ ಪಠಾಣ್​​​ ಗೆಲುವು ಸುಲಭವಾಯಿತು ಎಂದು ವಿಶ್ಲೇಷಿಸಲಾಗಿದೆ.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *