Breaking News

ಗದಗ ಡಿಸಿ ವಿರುದ್ಧ ಮತ್ತೊಂದು ಆರೋಪ: ಸಹೋದರನಿಗಾಗಿ ಸರ್ಕಾರಿ ಕಾರು, ಗನ್‌ಮ್ಯಾನ್ ದುರ್ಬಳಕೆ

ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಅವರ ಕಿರಿಯ ಸಹೋದರ ಸರ್ಕಾರಿ ಕಾರು, ಗನ್‌ಮ್ಯಾನ್ ಹಾಗೂ ಸರ್ಕಾರಿ ಆತಿಥ್ಯವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ರೋಣಾದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಡಿಸಿ ಕುಟುಂಬದ ಐವರು ಸದಸ್ಯರಿಗೆ ಆತಿಥ್ಯ ನೀಡಲಾಗಿದ್ದು, ಡಿಸಿ ಕಚೇರಿಯ ಆಪ್ತ ಸಹಾಯಕರ ಕರೆ ಮೇರೆಗೆ ವ್ಯವಸ್ಥೆ ಮಾಡಲಾಗಿತ್ತು ಎಂದು ತಹಶೀಲ್ದಾರ್ ತಿಳಿಸಿದ್ದಾರೆ. ಇತ್ತೀಚೆಗೆ ಡಿಸಿ ಬೀಳ್ಕೊಡುಗೆ ಸಮಾರಂಭದಲ್ಲಿ ಡಿಜೆ ಹಾಕಿ ಮೋಜು-ಮಸ್ತಿ ನಡೆಸಿದ ವಿವಾದದ ಬೆನ್ನಲ್ಲೇ ಈ ಆರೋಪ ಕೇಳಿಬಂದಿದ್ದು, ಜಿಲ್ಲಾಧಿಕಾರಿ ಕಚೇರಿಯ ಕಾರ್ಯವೈಖರಿ ಕುರಿತು ಚರ್ಚೆ ಆರಂಭವಾಗಿದೆ.

Share News

About BigTv News

Check Also

ವಾಕಿಂಗ್ ಮಾಡ್ತಿದ್ದವರಿಂದ ವಸೂಲಿ ಪ್ರಕರಣ, ಘಟ್ಟದ ಮೇಲಿನ ಪೊಲೀಸರ ಕೃತ್ಯವೆಂದು ಅವಹೇಳನ ಮಾತು ; ತನ್ನ ಕಾರು ಚಾಲಕನನ್ನೇ ಅಮಾನತುಗೊಳಿಸಿದ ಕಮಿಷನ‌ರ್ !

ಮಂಗಳೂರು ನಗರದ ಮಹಿಳಾ ಪೊಲೀಸರು ಹಾಗೂ ಘಟ್ಟದ ಭಾಗದ ಪೊಲೀಸ್ ಸಿಬ್ಬಂದಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಪೊಲೀಸ್ ಕಮಿಷನರ್ ಕಾರು …

Leave a Reply

Your email address will not be published. Required fields are marked *