Breaking News

ಮಾಸ್ತಿ ಸಮೀಪ ಬಿಜೆಪಿ ಮುಖಂಡನ ಕಾರಿನ ಮೇಲೆ ಶೂಟೌಟ್: ಇಬ್ಬರಿಗೆ ಗಾಯ!

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಗ್ರಾಮದ ಸಮೀಪ ಚಲಿಸುತ್ತಿದ್ದ ಇನ್ನೋವಾ ಕಾರಿನ ಮೇಲೆ ಗುಂಡಿನ ದಾಳಿ ನಡೆದಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿ ನರೇಂದ್ರ ಅವರ ಸಹೋದರರಾದ ರವಿ ಹಾಗೂ ರೌಡಿಶೀಟರ್ ಪ್ರತಾಪ್ ಕಾರಿನಲ್ಲಿದ್ದಾಗ ಈ ಘಟನೆ ನಡೆದಿದೆ. ಅಣಿಕರಣಹಳ್ಳಿಯಿಂದ ಮಾಸ್ತಿ ಕಡೆಗೆ ಬರುತ್ತಿದ್ದಾಗ ಕಾರಿನ ಮೇಲೆ ಗುಂಡು ಹಾರಿಸಲಾಗಿದೆ ಎನ್ನಲಾಗಿದೆ. ಕಾರಿನ ಗಾಜಿನಲ್ಲಿ ಎರಡು ಗುಂಡಿನ ಗುರುತುಗಳು ಪತ್ತೆಯಾಗಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದಾರೆ. ಶೂಟೌಟ್ ಹಿಂದಿನ ಕಾರಣ ಹಾಗೂ ತಮಿಳುನಾಡಿನ ನಂಟಿನ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share News

About BigTv News

Check Also

ವಾಕಿಂಗ್ ಮಾಡ್ತಿದ್ದವರಿಂದ ವಸೂಲಿ ಪ್ರಕರಣ, ಘಟ್ಟದ ಮೇಲಿನ ಪೊಲೀಸರ ಕೃತ್ಯವೆಂದು ಅವಹೇಳನ ಮಾತು ; ತನ್ನ ಕಾರು ಚಾಲಕನನ್ನೇ ಅಮಾನತುಗೊಳಿಸಿದ ಕಮಿಷನ‌ರ್ !

ಮಂಗಳೂರು ನಗರದ ಮಹಿಳಾ ಪೊಲೀಸರು ಹಾಗೂ ಘಟ್ಟದ ಭಾಗದ ಪೊಲೀಸ್ ಸಿಬ್ಬಂದಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಪೊಲೀಸ್ ಕಮಿಷನರ್ ಕಾರು …

Leave a Reply

Your email address will not be published. Required fields are marked *