Breaking News

ದುಡ್ಡು ಕೊಡದೇ ವೋಟ್ ಹಾಕಲ್ಲ ನೀನು!- ಅಭಿವೃದ್ಧಿ ಪ್ರಶ್ನಿಸಿದ ಮತದಾರನ ಮೇಲೆ ಶಾಸಕ ಚಂದ್ರಪ್ಪ ಗರಂ!-

ಚಿತ್ರದುರ್ಗ ಜಿಲ್ಲೆಯ ಕೋಗುಂಡೆ ಗ್ರಾಮದಲ್ಲಿ ಅಭಿವೃದ್ಧಿ ಕುರಿತು ಪ್ರಶ್ನಿಸಿದ ಯುವಕನ ಮೇಲೆ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಗರಂ ಆಗಿದ್ದಾರೆ. ‘ದುಡ್ಡು ಕೊಡದೇ ನೀನು ವೋಟ್ ಹಾಕಿಲ್ಲ’ ಎಂದು ಹೇಳಿದ್ದು, ಯುವಕ ತಿರುಗೇಟು ನೀಡಿದ್ದಾನೆ. ಮುಚ್ಚುಗನೂರು ರಸ್ತೆ ಕಾಮಗಾರಿಯ ಭೂಮಿಪೂಜೆ ವೇಳೆ ಈ ಘಟನೆ ನಡೆದಿದೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಯುವಕ ಪ್ರಶ್ನಿಸಿದ್ದಕ್ಕೆ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವಕನನ್ನು ಕಾರ್ಯಕ್ರಮದಿಂದ ಹೊರಗೆ ಕಳುಹಿಸುವಂತೆ ಸೂಚಿಸಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇಬ್ಬರ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Share News

About BigTv News

Check Also

ವಾಕಿಂಗ್ ಮಾಡ್ತಿದ್ದವರಿಂದ ವಸೂಲಿ ಪ್ರಕರಣ, ಘಟ್ಟದ ಮೇಲಿನ ಪೊಲೀಸರ ಕೃತ್ಯವೆಂದು ಅವಹೇಳನ ಮಾತು ; ತನ್ನ ಕಾರು ಚಾಲಕನನ್ನೇ ಅಮಾನತುಗೊಳಿಸಿದ ಕಮಿಷನ‌ರ್ !

ಮಂಗಳೂರು ನಗರದ ಮಹಿಳಾ ಪೊಲೀಸರು ಹಾಗೂ ಘಟ್ಟದ ಭಾಗದ ಪೊಲೀಸ್ ಸಿಬ್ಬಂದಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಪೊಲೀಸ್ ಕಮಿಷನರ್ ಕಾರು …

Leave a Reply

Your email address will not be published. Required fields are marked *