Breaking News

ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗು ಜೋರಾಗಿಯೇ ಕೇಳಿಬರುತ್ತಿದೆ…

ಹುಬ್ಬಳ್ಳಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗು ಜೋರಾಗಿಯೇ ಕೇಳಿಬರುತ್ತಿದೆ. ಸ್ವಪಕ್ಷದಲ್ಲೇ ಭಿನ್ನಮತಗಳು ಕೂಡ ಭುಗಿಲೆದ್ದಿವೆ. ಇದರ ಬೆನ್ನಲೇ ಇದೀಗ ಇಂದು (ನವೆಂಬರ್‌ 03) ಡಿ.ಕೆ.ಶಿವಕುಮಾರ್ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಈ ವೇಳೆ ಅವರನ್ನು ಸ್ವಾಗತಿಸಲು ಒಬ್ಬೇ ಒಬ್ಬ ಶಾಸಕರು ಮಾತ್ರ ಆಗಮಿಸಿದ್ದರು. ಇನ್ನು ಉಳಿದ ಶಾಸಕರು ಗೈರಾಗಿದ್ದ ಈ ಸನ್ನೀವೇಶ ಹಲವು ಊಹಾಪೋಹಗಳಿಗೂ ಕಾರಣವಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಒಟ್ಟು ನಾಲ್ಕು ಜನ ಕಾಂಗ್ರೆಸ್‌ ಶಾಸಕರಿದ್ದಾರೆ. ಆದರೆ ಡಿ.ಕೆ.ಶಿವಕುಮಾರ್‌ ಸ್ವಾಗತಕ್ಕೆ ನವಲಗುಂದ ಶಾಸಕ ಎನ್‌.ಎಚ್‌.ಕೋನರೆಡ್ಡಿ ಮಾತ್ರ ಆಗಮಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಲಘಟಗಿ ಶಾಸಕ ಸಂತೋಷ್‌ ಲಾಡ್‌, ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಅಬ್ಬಯ್ಯ ಗೈರಾಗಿದ್ದಾರೆ. ಇನ್ನು ಕೋರ್ಟ್‌ ಆದೇಶ ಹಿನ್ನೆಲೆ ಧಾರವಾಡ ಶಾಸಕ ವಿನಯ್‌ ಕುಲಕರ್ಣಿ ಜಿಲ್ಲಯೊಳಗೆ ಪ್ರವೇಶ ಮಾಡುವಂತಿಲ್ಲ.

Share News

About BigTv News

Check Also

ಮರಳು ಮಾಫಿಯಾದಲ್ಲಿ ಲೋಕಾಯುಕ್ತರ ದಾಳಿ ಬಳಿಕ… ಕಾಲು ಕೆತ್ತು ಓಡಿ ಹೋದ ಹುಬ್ಬಳ್ಳಿ ‘ಆನೆ ಒಂಟೆ ’!

ಮರಳು ಮಾಫಿಯಾಗೆ ಲೋಕಾಯುಕ್ತ ಶಾಕ್! ಲಂಚದ ಜಾಲದಲ್ಲಿ ಸಿಕ್ಕಿದ್ದು ಕೆಳಹಂತದವರೇನಾ, ಇನ್ನೂ ದೊಡ್ಡವರ ಸರದಿ ಬಾಕಿಯಿದೆಯಾ..? ಹುಬ್ಬಳ್ಳಿ: ಮರಳು ದಂಧೆಯ …

Leave a Reply

Your email address will not be published. Required fields are marked *