ಕಲಬುರಗಿ: ಪರಿಶಿಷ್ಟ ಸಮುದಾಯದ ನಾಯಕರ ಬಗ್ಗೆ ‘ಗುಲಾಮರ ಅಪ್ಪ’ ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸಿ ಬರಹ ಪ್ರಕಟಿಸುತ್ತಿದ್ದ ವ್ಯಕ್ತಿಯನ್ನು ನಗರದ ಸಬರ್ಬನ್ ಠಾಣೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಬೆಂಗಳೂರಿನ ವಿದ್ಯಾಮಾನ್ಯ ನಗರದ ನಿವಾಸಿ ಆನಂದ್ ಅಂಜನಪ್ಪ (41) ಬಂಧಿತ ಆರೋಪಿ. ಬೆಂಗಳೂರು ರೇಸ್‌ಕೋರ್ಸ್ ರಸ್ತೆಯ ಕಂಪನಿಯೊಂದರಲ್ಲಿ ಹಿರಿಯ ಐಟಿ ಎಕ್ಸಿಕ್ಯುಟಿವ್ ಆಗಿ ಕೆಲಸ ಮಾಡಿದ್ದ ಎಂದು ಮೂಲಗಳು ತಿಳಿಸಿವೆ. ‘ಗುಲಾಮರ ಅಪ್ಪ’ ಹೆಸರಲ್ಲಿ ಫೇಸ್‌ಬುಕ್ ಖಾತೆ ತೆರೆದಿದ್ದ ಆನಂದ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಪರಿಶಿಷ್ಟ ಸಮುದಾಯದ ನಾಯಕರ ಬಗೆಗೆ ಅವಹೇಳಕಾರಿ ಬರಹ ಪ್ರಕಟಿಸುತ್ತಿದ್ದ. ಈ ಬಗೆಗೆ ದಲಿತ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ ಸಬರ್ಬನ್ ಠಾಣೆಗೆ ದೂರು ನೀಡಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

