Breaking News

ರಾಶಿ ಮಷಿನ್​​ಗೆ ಸೀರೆ ಸಿಲುಕಿ ಮಹಿಳೆ ಸಾವು



ಬಾಗಲಕೋಟೆ: ರಾಶಿ ಮಷಿನ್​​ಗೆ ಸೀರೆ ಸಿಲುಕಿ ಅವಘಡ ಸಂಭವಿಸಿದರಿಂದ ಮಹಿಳೆ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಶಿರೂರ ಗ್ರಾಮದಲ್ಲಿ ನಡೆದಿದೆ.
ಮೆಕ್ಕೆ ಜೋಳದ ರಾಶಿ ಮಾಡುವ ವೇಳೆ ಭಾನುವಾರ ಈ ಘಟನೆ ನಡೆದಿದೆ.

ರೇಣುಕಾ ಮಾದರ ಮೃತ ಮಹಿಳೆ. ರಾಶಿ ಮಾಡುವಾಗ ಮಷಿನ್​ನಲ್ಲಿ ಮೆಕ್ಕೆ ಜೋಳ ಹಾಕುವ ಸಮಯದಲ್ಲಿ ಸೀರೆ ಸಿಲುಕಿದೆ. ಇದರಿಂದ ಮಷಿನ್​ನಲ್ಲಿ ದೇಹ ಸಿಲುಕಿ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ತೋಗುಣಸಿ ಗ್ರಾಮದ ರೇಣುಕಾ ಎರಡು ದಿನಗಳ ಹಿಂದೆ ಶಿರೂರಗೆ ಬಂದಿದ್ದರು. ಇಂದು ಹೊಲದಲ್ಲಿ ಕೆಲಸ ಮಾಡಲು ಬಂದಾಗ ಈ ಘಟನೆ ನಡೆದಿದೆ.

ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಬೆನ್ನಲ್ಲೇ ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *