ಜಿ ಯುನಿವರ್ಸ್ ಸುಶ್ಮಿತಾ ಸೇನ್ ತಮ್ಮ ಆಕರ್ಷಕ ಬಾಡಿ ಲ್ಯಾಂಗ್ವೇಜ್ ಹಾಗೂ ಕಣ್ಮನ ಸೆಳೆಯುವ ಮಾದಕ ಮೋಹತೆಗೆ ಸಾಕಷ್ಟು ಹೆಸರಾದವರು. ಈ ಪ್ರತಿಭೆ ಕೇವಲ ಮಾಡೆಲಿಂಗ್ ಜಗತ್ತಿನಲ್ಲಿ ಮಾತ್ರವಲ್ಲದೆ ಬಾಲಿವುಡ್ ಚಿತ್ರರಂದಲ್ಲೂ ಮಿಂಚಿದ್ದಾರೆ. ತಮ್ಮ ನಟನೆಯ ಮೂಲಕ ಸಾಕಷ್ಟು ಹಿಟ್ ಚಿತ್ರಗಲಿಂದ ಅಭಿಮಾನಿ ಬಳಗ ಗಳಿಸಿದ್ದಾರೆ.
ಇತ್ತೀಚಿನ ಅವರ ತಾಲಿ ಚಿತ್ರದಲ್ಲೂ ಸಹ ಅವರ ಮನೋಜ್ಞ ಅಭಿನಯವನ್ನು ಕಾಣಬಹುದು. ಪಶ್ಚಿಮ ಬಂಗಾಳ ಮೂಲದವರಾದ ಸುಶ್ಮಿತಾ ಇತ್ತೀಚೆಗೆ ಮುಂಬೈನಲ್ಲಿ ನವರಾತ್ರಿ ಉತ್ಸವದ ಪೆಂಡಾಲ್ ಒಂದಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರು ಧರಿಸಿ ಬಂದಿದ್ದ ಬಾಂಧನಿ ಸೀರೆ ಹಾಗೂ ಹಾಕಿದ ಕೆಲ ನೃತ್ಯದ ಸ್ಟೆಪ್ ಗಳು ಅಲ್ಲಿದ್ದ ಎಲ್ಲರ ಮನಗೆದ್ದಿದೆ ಎನ್ನಬಹುದು. ವಾಸ್ತವದಲ್ಲಿ ಅವರ ಉಪಸ್ಥಿತಿ ಅಲ್ಲಿನ ದೊಡ್ಡ ಹೈಲೈಟ್ ಆಗಿತ್ತು ಎನ್ನಬಹುದು.
ಸುಶ್ಮಿತಾ ಸೇನ್ ಫ್ಯಾಶನ್ ಬಗ್ಗೆ ಸಾಕಷ್ಟು ಸೂಕ್ಷ್ಮ ಪ್ರಜ್ಞೆ ಹೊಂದಿದ್ದು ತಮ್ಮ ಸಾಂಪ್ರಯಿಕ ಶೈಲಿಯೊಂದಿಗೆ ಹೊಸತರದ ಫ್ಯಾಷನ್ ಅನ್ನು ಸಹ ಸಲೀಸಾಗಿ ಸಂಯೋಜಿಸುತ್ತಾರೆ ಎಂದರೆ ತಪ್ಪಾಗದು.ಈ ಮೋಹಕ ಸುಂದರಿ ಕಳೆದ ರಾತ್ರಿ ಮುಂಬೈನ ನೊಟುನ್‌ಪಲ್ಲಿ ಸರ್ಬೋಜೋನಿನ್ ದುರ್ಗೋಸ್ಟಾಬ್ ಎಂಬ ನವರಾತ್ರಿ ಉತ್ಸವದ ವೇದಿಕೆಗೆ ತಮ್ಮ ಪುತ್ರಿಯರಾದ ರೆನೀ ಮತ್ತು ಅಲಿಸಾ ಅವರೊಂದಿಗೆ ಹಾಜರಾಗಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





