Breaking News

ಸಿ.ಎಸ್​.ಶಿವಳ್ಳಿ ಸಾವಿಗೆ ದೋಸ್ತಿ ಸರ್ಕಾರದ ಕಿರುಕುಳವೇ ಕಾರಣ: ಶ್ರೀರಾಮುಲು

ಹುಬ್ಬಳ್ಳಿ: ಸಿ.ಎಸ್​.ಶಿವಳ್ಳಿ ಸಾವಿಗೆ ಕಾಂಗ್ರೆಸ್-ಜೆಡಿಎಸ್​ ನೇತೃತ್ವದ ಮೈತ್ರಿ ಸರ್ಕಾರವೇ ಕಾರಣ ಅಂತಾ ಶಾಸಕ ಶ್ರೀರಾಮುಲು ಆರೋಪಿಸಿದ್ದಾರೆ. ಕುಂದಗೋಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡರ್ ಪರ ಬೆಟದೂರು ಗ್ರಾಮದಲ್ಲಿ ಪ್ರಚಾರ ನಡೆಸಿ ಮಾತನಾಡಿದ ಶಾಸಕ, ಸಿಎಸ್​ ಶಿವಳ್ಳಿ ಮೈತ್ರಿ ಸರ್ಕಾರದ ಕಿರುಕುಳದಿಂದಲೇ ಮೃತಪಟ್ಟಿದ್ದಾರೆ. ಹೀಗಾಗಿ ಕುಂದಗೋಳ ಜನರಿಗೆ ಸೆಡು ತೀರಿಸಿಕೊಳ್ಳುವ ಸಮಯ ಬಂದಿದೆ ಎಂದರು.ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ದೊಡ್ಡ ಮನುಷ್ಯ, ಮತ್ತೊಮ್ಮೆ ಸಿಎಂ ಆಗಬೇಕು. ಬಹಳ ವರ್ಷಗಳಿಂದ ಹೋರಾಟ ಮಾಡಿದ್ದಾರೆ. ನಮ್ಮ ಜೀವ ಹೋಗ್ಲಿ, ಆದರೆ ಬಿಎಸ್​ವೈ ಸಿಎಂ ಆಗಬೇಕು. ನಮಗೆ ಯಾವುದೇ ಅಧಿಕಾರದ ಆಸೆ ಇಲ್ಲ. ಮುಂದೆ ಬಿಎಸ್ ಯಡಿಯೂರಪ್ಪಗೆ ವಯಸ್ಸು ಸಹಕರಿಸಲ್ಲ. ಈ ಬಾರಿಯೇ ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕು. ನಾಟಕ ಆಡೋದು ಯಡಿಯೂರಪ್ಪಗೆ ಗೊತ್ತಿಲ್ಲ. ಏನೋ ಸ್ವಲ್ಪವೇ ಸಿಡುಕು ಸ್ವಭಾವವಿದೆ ಅಷ್ಟೇ ಎಂದರು.

Share News

About admin

Check Also

ಡಿಜಿ ಆದೇಶಕ್ಕೆ ಹೊಸ ಕಮಿಷನರ್‌ ಬೆಲೆ ತಂದರಾ..? ಟ್ರಾಫಿಕ್ ಪೊಲೀಸರ ದರ್ಬಾರ್‌ಗೆ ಭೂಷಣ್‌ ಬೊರಸೆ ಬ್ರೇಕ್..!

ಡಿಜಿ ಆದೇಶಕ್ಕೆ ಗೌರವ ತಂದ ಹೊಸ ಕಮಿಷನರ್‌..! ಟ್ರಾಫಿಕ್ ವ್ಯವಸ್ಥೆಗೆ ಹೊಸ ರೂಪ — ಹುಬ್ಬಳ್ಳಿ ನೂತನ ಪೊಲೀಸ್ ಕಮಿಷನರ್‌ …

Leave a Reply

Your email address will not be published. Required fields are marked *