ಡಿಜಿ ಆದೇಶಕ್ಕೆ ಗೌರವ ತಂದ ಹೊಸ ಕಮಿಷನರ್..!
ಟ್ರಾಫಿಕ್ ವ್ಯವಸ್ಥೆಗೆ ಹೊಸ ರೂಪ — ಹುಬ್ಬಳ್ಳಿ ನೂತನ ಪೊಲೀಸ್ ಕಮಿಷನರ್ ಭೂಷಣ್ ಜಿ. ಬೊರಸೆ, IPS ಖಡಕ್ ಎಂಟ್ರಿ..!
ಹುಬ್ಬಳ್ಳಿ ನಗರದಲ್ಲಿ ಟ್ರಾಫಿಕ್ ವ್ಯವಸ್ಥೆ ಸುಧಾರಣೆಗೆ ನೂತನ ಪೊಲೀಸ್ ಕಮಿಷನರ್ ಭೂಷಣ್ ಜಿ. ಬೊರಸೆ, IPS ಅವರು ಮಹತ್ವದ ಹೆಜ್ಜೆ ಇಟ್ಟಿದ್ದಾರೆ ಎನ್ನಲಾಗಿದ್ದು, ಇದರಿಂದ ಟ್ರಾಫಿಕ್ ವಿಭಾಗದಲ್ಲಿ ಹೊಸ ಚರ್ಚೆ ಶುರುವಾಗಿದೆ…

ವಾಹನ ತಪಾಸಣೆ ವೇಳೆ ಸಾರ್ವಜನಿಕರಿಗೆ ಅನಗತ್ಯ ಕಿರುಕುಳ ನೀಡಬಾರದು, ನಿಯಮಾನುಸಾರವೇ ತಪಾಸಣೆ ನಡೆಸಬೇಕು ಎಂಬ ಮೇಲಾಧಿಕಾರಿಗಳ ಸೂಚನೆಗಳ ನಡುವೆ, ಹೊಸ ಕಮಿಷನರ್ ಅವರ ಕಟ್ಟುನಿಟ್ಟಿನ ನಿಲುವು ಟ್ರಾಫಿಕ್ ಸಿಬ್ಬಂದಿಯಲ್ಲಿ ಎಚ್ಚರಿಕೆ ಮೂಡಿಸಿದೆ…
ಡಿಜಿ ಆದೇಶ ಕೇವಲ ಆದೇಶವಾಗಿಯೇ ಉಳಿಯಬೇಕಾ..? ಅಥವಾ ನೆಲಮಟ್ಟದಲ್ಲೂ ಜಾರಿಯಾಗಬೇಕಾ..? ಎಂಬ ಪ್ರಶ್ನೆಗೆ ಇದೀಗ ಹೊಸ ಕಮಿಷನರ್ ಕಾರ್ಯವೈಖರಿಯ ಮೂಲಕ ಉತ್ತರ ಸಿಗುವ ನಿರೀಕ್ಷೆ ಮೂಡಿದೆ…

ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಪೊಲೀಸರ ಕರ್ತವ್ಯ. ಆದರೆ ಅದೇ ಸಂದರ್ಭದಲ್ಲಿ ನಿಯಮ ಪಾಲಿಸುವ ಸಾರ್ವಜನಿಕರಿಗೆ ಅನಗತ್ಯ ತೊಂದರೆ ಆಗದಂತೆ ನೋಡಿಕೊಳ್ಳುವುದೂ ಇಲಾಖೆಯ ಜವಾಬ್ದಾರಿ…
ಟ್ರಾಫಿಕ್ ಜಾಮ್ ನಿಯಂತ್ರಣ, ರಸ್ತೆ ಸುರಕ್ಷತೆ, ಅಕ್ರಮ ಪಾರ್ಕಿಂಗ್ ತಡೆ ಹಾಗೂ ಸಾರ್ವಜನಿಕರಿಗೆ ಸುಗಮ ಸಂಚಾರ ಕಲ್ಪಿಸುವತ್ತ ಹೆಚ್ಚಿನ ಗಮನ ನೀಡಬೇಕಿದೆ ಎಂಬುದು ಜನರ ನಿರೀಕ್ಷೆ…
ಇದುವರೆಗೆ ಕೇಳಿಬಂದಿದ್ದ “ಡಾಕ್ಯುಮೆಂಟ್ ಚೆಕ್ ಹೆಸರಿನಲ್ಲಿ ಕಿರುಕುಳ, ದಂಡ ವಸೂಲಿಗೆ ಟಾರ್ಗೆಟ್” ಸೇರಿದಂತೆ ವಿವಿಧ ಆರೋಪಗಳಿಗೂ ಹೊಸ ಕಮಿಷನರ್ ಅವರ ಕಾರ್ಯವೈಖರಿ ಉತ್ತರವಾಗಬೇಕಿದೆ…
ಕೇಸ್ ಹಾಕುವುದಷ್ಟೇ ಟ್ರಾಫಿಕ್ ಪೊಲೀಸರ ಕೆಲಸವಲ್ಲ…
ಜನರಿಗೆ ಸುಗಮ ಸಂಚಾರ ಕಲ್ಪಿಸುವುದೂ ಕರ್ತವ್ಯ” ಎನ್ನುವ ಸಂದೇಶವನ್ನು ಇಲಾಖೆ ಸ್ಪಷ್ಟವಾಗಿ ನೀಡಬೇಕಾಗಿದೆ…
ಹೀಗಾಗಿ, ಡಿಜಿ ಆದೇಶಕ್ಕೆ ನೆಲಮಟ್ಟದಲ್ಲಿ ಗೌರವ ತಂದು, ಟ್ರಾಫಿಕ್ ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೇಹಿಯಾಗಿ ರೂಪಿಸುವಲ್ಲಿ ನೂತನ ಕಮಿಷನರ್ ಭೂಷಣ್ ಜಿ. ಬೊರಸೆ, IPS ಅವರು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದು ಈಗ ಕುತೂಹಲ ಮೂಡಿಸಿದೆ…
ಟ್ರಾಫಿಕ್ ಪೊಲೀಸರ ದರ್ಬಾರ್‌ಗೆ ಬ್ರೇಕ್ ಬೀಳುತ್ತಾ..?ಸಾರ್ವಜನಿಕರ ಮೇಲಿನ ಅನಗತ್ಯ ಕಿರುಕುಳಕ್ಕೆ ಕಡಿವಾಣ ಬೀಳುತ್ತಾ..?
ಡಿಜಿ ಆದೇಶ ನಿಜಕ್ಕೂ ಪರಿಣಾಮಕಾರಿಯಾಗಿ ಜಾರಿಯಾಗುತ್ತಾ..?
ಇದಕ್ಕೆಲ್ಲಾ ಹೊಸ ಕಮಿಷನರ್ ಅವರ ಮುಂದಿನ ಕಾರ್ಯಾಚರಣೆಯೇ ಉತ್ತರ ಕೊಡಬೇಕಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

