ಟೈಯರ್ ಸ್ಪೋಟಗೊಂಡು ಮಾವಿನ ಕಾಯಿ ತುಂಬಿದ್ದ ಟೆಂಪೋ ಪಟ್ಟಿಯಾದ ಘಟನೆ ಚಿಂತಾಮಣಿ ತಾಲ್ಲೂಕಿನ ಎನ್ ಹೊಸಹಳ್ಳಿ ಗೇಟ್ ಬಳಿ ನಡೆದಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೊಸಕೋಟೆ ತಾಲ್ಲೂಕಿನ ಮಲ್ಲಿಮಾಕಲಪುರದ ನವೀನ್ ಎಂಬುವರಿಗೆ ಸೇರಿದ ಟೆಂಪೋವಾಗಿದ್ದು, ಚಿಂತಾಮಣಿ ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದಾಗ ಟೆಂಪೋ ಪಲ್ಟಿಯಾದ ಘಟನೆ ಸಂಭವಿಸಿದೆ. ಈ ಕುರಿತುಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





