ತ್ರಿಬಾಷಾ ನೀತಿಗೆ ಕುಂ.ವೀರಭದ್ರಪ್ಪ ವಿರೋಧ ವ್ಯಕ್ತಪಡಿಸಿದರು. ಚಿತ್ರದುರ್ಗದಲ್ಲಿ ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಮ್ಮ ಜೀವನ ಕನ್ನಡ ಭಾಷೆ ಮೇಲೆ ಅವಲಂಬಿಸಿದೆ. ಹಾಗಾಗಿ ಕನ್ನಡ ರಕ್ಷಿಸಿ ಹಿಂದಿ ವಿರೋಧಿಸಿ ಎಂದರು. ಹಿಂದಿ ಯಾವುದೇ ಕಾರಣಕ್ಕೂ ನಮ್ಮ ಗಡಿ ದಾಟದಂತೆ ನೋಡಿಕೊಳ್ಳಬೇಕು. ನಮ್ಮ ಕೆಂಪು-ಬಿಳಿ ರಕ್ತ ಕಣಗಳನ್ನ ಇನ್ನೊಂದು ಭಾಷೆ ಆಕ್ರಮಿಸದಂತೆ ನೋಡಿಕೊಳ್ಳಬೇಕು. ಹಿಂದಿ ಸಾಹಿತ್ಯವನ್ನ ನಾವು ಓದಿದ್ದೇವೆ. ಕನ್ನಡ ನಾಶವಾದರೆ ನಮ್ಮ ಜೀವನ ನಾಶವಾಗುತ್ತದೆ. ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಕೆಲ ದಿನಗಳಾಗಿದೆ. ಆಗಲೇ ಒಂದು ಭಾಷೆಯ ಮೇಲೆ ಹಲ್ಲೆ ನಡಿಯುತ್ತಿದೆ. ನಾವು ಬಿಜೆಪಿ ವಿರೋಧಿಯಲ್ಲ ಆದರೆ ಏಕ ಭಾಷೆ, ಏಕ ನೀತಿಯ ವಿರೋಧಿ. ಸಂವಿಧಾನಕ್ಕೆ ದಕ್ಕೆ ತರುವ ಕೆಲಸ ಯಾರೂ ಮಾಡಬಾರದು. ಪೇಜಾವರ ಶ್ರೀಗಳು ಸಂವಿದಾನದ ವಿರುದ್ದ ಹೇಳಿಕೆ ನೀಡುತ್ತಿದ್ದಾರೆ. ಸಂವಿಧಾನ ವಿರೋಧಿಸಿದವರು ಸಂಸದರಾಗಿದ್ದಾರೆ. ದೇಶದಲ್ಲಿ ಸರ್ವಾಧಿಕಾರಿ ಶಕ್ತಿಗಳು ಪ್ರವೇಶ ಮಾಡುತ್ತಿವೆ.ಕಮಲದ ಬಗ್ಗೆ ಒಂದಾನೊಂದು ಕಾಲದಲ್ಲಿ ಗೌವರ ಇತ್ತು.ಬದ್ದತೆ ದೇಹಕ್ಕೆ ಅಪಾಯಕಾರಿ. ಕಮಲದಿಂದ ದೇಶದ ಆಡಳಿತ ವ್ಯವಸ್ಥೆ ಏರುಪೇರಾಗುತ್ತೆ ಎಂದು ಕೇಂದ್ರದ ನಡೆ ವಿರುದ್ಕು.ವೀ ರವರು ತಮ್ಮ ಅಸಮಾಧಾನ ಹೊರ ಹಾಕಿದರು .
bigtvnews | Hubli Dharwad News | Kannada News | Karnataka News Hubli News | News In Hubli | Local news





