Breaking News

ರಾಜ್ಯದಲ್ಲಿ ತಮ್ಮ ಬೇರು ಗಟ್ಟಿ ಪಡಿಸಲು ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ

ಬೆಂಗಳೂರು:

ಕಳೆದ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲನ್ನು
ಅನುಭವಿಸಿದ ಜೆಡಿಎಸ್ ಪಕ್ಷ ಮತ್ತೆ ರಾಜ್ಯದಲ್ಲಿ ತಮ್ಮ ಬೇರು ಗಟ್ಟಿ ಪಡಿಸಲು ಸಿಎಂ ಕುಮಾರಸ್ವಾಮಿ
ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದಾರೆ.
ಇದೇ ತಿಂಗಳು ಉತ್ತರ ಕರ್ನಾಟಕ ಭಾಗದಿಂದ ಚಾಲನೆ
ಸಿಗಲಿದೆ. ಆದರೆ ಈ ಬಾರಿಯ ಗ್ರಾಮ ವಾಸ್ತವ್ಯ ಹಿಂದಿನ ಗ್ರಾಮ ವಾಸ್ತವ್ಯಕ್ಕಿಂತ ಸಾಕಷ್ಟು
ವಿಶೇಷವಾಗಿರುತ್ತದೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ಸಿಎಂ ಕುಮಾರಸ್ವಾಮಿ
ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಆ ಹೋಬಳಿ ಅಥವಾ ಪಂಚಾಯ್ತಿ ಮಟ್ಟದ ಅಧಿಕಾರಿಗಳು ಹಾಗೂ
ಜನಪ್ರತಿನಿಧಿಗಳನ್ನ ಬಿಟ್ಟು ಬೇರೆ ಹೋಬಳಿಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅಲ್ಲಿಗೆ
ಬರುವಂತಿಲ್ಲ. ಅದೇ ಹೋಬಳಿ ಅಥವಾ ಗ್ರಾಮ ಪಂಚಾಯ್ತಿ ಮಟ್ಟದ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಗ್ರಾಮ ವಾಸ್ತವ್ಯದ
ಸಂದರ್ಭದಲ್ಲಿ ತಮ್ಮ ಬೇಡಿಕೆಯನ್ನು ಮುಂದಿಡುವಂತಿಲ್ಲ. ಸಂಪೂರ್ಣವಾಗಿ ಗ್ರಾಮದ ಹಿತಕ್ಕಾಗಿ
ಬೇಡಿಕೆ ಮಾತ್ರ ಇರಬೇಕು ಎಂದು ತಿಳಿದು ಬಂದಿದೆ. ಒಂದು ವೇಳೆ
ಕಾರ್ಯಕರ್ತರ ಬೇಡಿಕೆ ಇದ್ದರೆ ಪ್ರತ್ಯೇಕವಾಗಿ ಮಾತನಾಡಿ ಮನವಿ ಸಲ್ಲಿಸಬಹುದು. ಸಿಎಂ
ಉಳಿದುಕೊಳ್ಳುವ ಶಾಲೆ ಹೊಸದಾಗಿ ಸುಣ್ಣ ಬಣ್ಣ ಬಳಿದು ಸಿದ್ಧಪಡಿಸಿ ಆಡಂಬರ ಮಾಡುವಂತಿಲ್ಲ. ಶೌಚಾಲಯ
ಮುಂತಾದ ವ್ಯವಸ್ಥೆಗಳು ಮೊದಲು ಹೇಗಿತ್ತೋ ಹಾಗೆ ಇರಬೇಕು. ಮುಖ್ಯಮಂತ್ರಿ ಬರುತ್ತಾರೆ ಅನ್ನೋ
ಕಾರಣಕ್ಕೆ ಶಾಲೆಗೆ ಏಕಾಏಕಿ ಸೌಲಭ್ಯ ಕಲ್ಪಿಸುವಂತಿಲ್ಲ. ಸಿಎಂ ಕುಮಾರಸ್ವಾಮಿಗಾಗಿ ಹೊಸದಾಗಿ
ವ್ಯವಸ್ಥೆ ಕಲ್ಪಿಸಿ ಸಿಎಂ ಹೋದ ನಂತರ ಅದನ್ನ ಅಲ್ಲಿಂದ ಕೊಂಡೊಯ್ಯುವ ಬೂಟಾಟಿಕೆ ಮಾಡುವಂತಿಲ್ಲ
ಎಂಬ ಷರತ್ತು ವಿಧಿಸಿದ್ದಾರೆ.

Share News

About admin

Check Also

ಸಚಿವರಿಗೆ ಖಾತೆ ಹಂಚಿದ ಸಿಎಂ ಡಿಕೆಶಿ..! ಯಾರಿಗೆ ಯಾವ ಖಾತೆ ಸಿಕ್ಕಿತು..?

ಡಿಕೆಶಿ ಸರ್ಕಾರದಲ್ಲಿ ಖಾತೆ ಫಿಕ್ಸ್..! ಕೆಲವರಿಗೆ ಹಳೆ ಖಾತೆ, ಕೆಲವರಿಗೆ ಹೊಸ ಜವಾಬ್ದಾರಿ..! ಬೆಂಗಳೂರು: ಸಚಿವರಿಗೆ ಖಾತೆ ಹಂಚಿದ ಸಿಎಂ …

Leave a Reply

Your email address will not be published. Required fields are marked *