ಅತಿ ಶೀಘ್ರದಲ್ಲಿ ರಾಜ್ಯ ರಾಜಕಾರಣದಲ್ಲಿ ಬೃಹತ್ ಬೆಳವಣಿಗೆಯಾಗುವ ಲಕ್ಷಣಗಳು ಪ್ರತಿನಿತ್ಯ ಗೋಚರಿಸುತ್ತಿವೆ. ಇದಕ್ಕೆ ಪುಷ್ಟಿ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ರಾಮಲಿಂಗರೆಡ್ಡಿ ಪಕ್ಷ ತೊರೆದು ಬೇರೆ ಪಕ್ಷ ಸೇರುತ್ತಾರೆ ಎಂಬುವ ವದಂತಿ ಹರಿದಾಡುತ್ತಿದೆ. ರಾಮಲಿಂಗರೆಡ್ಡಿಯವರ ಹುಟ್ಟೂರು ಆನೇಕಲ್ ತಾಲ್ಲೂಕಿನ ಅಭಿಮಾನಿಗಳು ಹಾಗು ಕಾರ್ಯಕರ್ತರಿಂದ ಪೇಸ್ ಬುಕ್ ಪೋಸ್ಟ್ ನಲ್ಲಿ ಈ ವದಂತಿಗಳು ಶೇರ್ ಆಗುತ್ತಿದೆ. ಅತಿ ಶೀಘ್ರದಲ್ಲಿ ರಾಮಲಿಂಗರೆಡ್ಡಿಯವರು ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಾರೆ. ರಾಮಲಿಂಗರೆಡ್ಡಿ ಅವರ ನಿರ್ಧಾರಕ್ಕೆ ಅಭಿಮಾನಿಗಳು ಸದಾ ಸಿದ್ದರಿದ್ದೇವೆಂದು ಪೇಸ್ ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಇನ್ನಷ್ಟು ಬಲತುಂಬುವ ನಿಟ್ಟಿನಲ್ಲಿಪೇಸ್ ಬುಕ್ ಪೇಜ್ನಲ್ಲಿ ಆದಷ್ಟು ಬೇಗ ಬಿಜೆಪಿ ಪಕ್ಷ ಸೇರುತ್ತಾರೆಂದು ಬಿಜೆಪಿಯ ಕಾರ್ಯಕರ್ತರಿಂದ ಕಾಮೆಂಟ್ ಮಾಡಲಾಗುತ್ತಿದೆ. ಈ ಎಲ್ಲಾ ಬೆಳವಣಿಗೆಯ ಬಗ್ಗೆ ಕೈ ನಾಯಕರಲ್ಲಿ ಗೊಂದಲದ ವಾತಾವರಣವಿದ್ದರೇ ಇತ್ತ ಮೈತ್ರಿ ಪಕ್ಷ ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಕಾಂಗ್ರೆಸ್ ಪಕ್ಷದಲ್ಲಿ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





