ಭೀಕರ ಬರಗಾಲದಿಂದ ಜನರಿಗೆ ಕುಡಿಯಲು ನೀರಿಲ್ಲದೆ ತತ್ತರಿಸುವಂತಾಗಿದೆ. ಕೃಷ್ಣಾ ನದಿ ಬತ್ತಿ ಮೂರು ತಿಂಗಳು ಆಯಿತು. ರೈತರು ಕೃಷ್ಣಾ ನದಿಗೆ ನೀರು ಹರಿಸಲೇ ಬೇಕು ಎಂದು ಅಹೋರಾತ್ರಿ ಧರಣಿ ಮಾಡಿ ಕೈ ಚೆಲ್ಲಿದ್ದು ಆಯಿತು ಭರವಸೆಗಳನ್ನು ನೀಡಿದ ಜನಪ್ರತಿನಿದಿಗಳು ಮೌನಕ್ಕೆ ಶರಣಾದರು ಆದರೆ ಕ್ಷೇತ್ರದಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ಮಾಡಬೇಕಾದ ಕೆಲಸ ಉದ್ಯಮಿಯೊಬ್ಬರು ಮಾಡುತ್ತಿರುವದು ಜನರ ಮೆಚ್ಚುಗೆಗೆ ಪಾತ್ರವಾಗಿದೆಹೌದು ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದಲ್ಲಿ ದೀಲಿಪ್ ಕಾಂಬಳೆ ಅಥಣಿ ಜನರಿಗೆ ಕುಡಿಯುವ ನೀರನ್ನು ಸ್ವಂತ ಖರ್ಚಿನಲ್ಲಿ ಪೂರೈಕೆ ಮಾಡುತಿದ್ದಾರೆ ದೀಲಿಪ್ ಕಾಂಬಳೆ ತಮ್ಮದೆ ಮನೆಯ ಕೋಳವೆ ಬಾವಿಯಿಂದ ದಿನದ 12 ಗಂಟೆಗಳ ಕಾಲ 6 ಮತ್ತು 7 ನೇ ವಾರ್ಡಗಳ ಜನರಿಗೆ ಕುಡಿಯುವ ನೀರನ್ನು ಪೂರೈಸುತ್ತಿದ್ದಾರೆ .ಕೃಷ್ಣಾ ನದಿಗೆ ಕೊಯ್ನಾ ಡ್ಯಾಮನಿಂದ ನೀರು ಹರಿದು ಬಂದರೆ ಜನರಿಗೆ ನೀರಿನ ಬವನೆ ತಪ್ಪುತದೆ ಆದರೆ ಮೂವತ್ತುಕ್ಕು ಅಧೀಕ ಸಂಘಟನೆಗಳ ಸಹಯೋಗದಲ್ಲಿ ಪತ್ರಕರ್ತ, ನ್ಯಾಯವಾದಿಗಳು,ಮತ್ತು ಕರವೆ ಮುಂದಾಳತ್ವ ದಲ್ಲಿ ಹದಿಮೂರು ದಿನಗಳ ಕಾಲ ಅಹೋರಾತ್ರಿ ಧರಣಿಗೆ ಭರವಸೆ ನೀಡಿದ ರಾಜಕೀಯ ನಾಯಕರು ಸದ್ಯಕ್ಕೆ ಮೌನಕ್ಕೆ ಜಾರಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನೀರು ಬರುತಿದೆ ಎಂದು ಹೇಳಿದ ಜನಪ್ರತಿನಿದಿಗಳು ಇದೆ 6 ವರೆಗೆ ನೀರು ಬರುವ ಮಾತು ಕೇಳಿ ಬಂದಿದೆ ಆದರೆ ಸದ್ಯಕ್ಕೆ ಕೃಷ್ಟೆಗೆ ನೀರು ಬರುವ ಸಾದ್ಯತೆ ಇಲ್ಲಾ ಇಂತಹ ಸ್ಥಿತಿಯಲ್ಲಿ ಉಚಿತವಾಗಿ ನೀರು ಪೂರೈಕೆ ಮಾಡುತಿರುವದು ಜನರ ಸಂಕಷ್ಟಕ್ಕೆ ಆಸರೆಯಾಗಿದೆ. ಆರು ಮತ್ತು ಎಳನೆ ವಾರ್ಡಗಳಲ್ಲಿ ದೀಲಿಪ್ ಕಾಂಬಳೆ ನೀರು ಪೋರೈಕೆ ಮಾಡುತ್ತಿರುವದು ಹಾಲಿ ವಾರ್ಡ ಸದಸ್ಯರು ತಲೆ ತಗ್ಗಿಸುವಂತೆ ಮಾಡಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news





