Breaking News

ಮೇಲಾಧಿಕಾರಿಗಳಿಗೆ WPC ಫುಲ್ ಅವಾಜ್

ಮೇಲಾಧಿಕಾರಿಗಳಿಗೆ WPC ಫುಲ್ ಅವಾಜ್ ಹಾಕಿರುವ ಘಟನೆ ಹುಬ್ಬಳ್ಳಿಯ ಉಪ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಸಿಪಿಐ ಡಿಸೋಜಾ ಅವರಿಗೆ ಅವಾಜ್ ಹಾಕಿದ್ದ WPC ಎಂದು ತಿಳಿದು ಬಂದಿದೆ. ನಿನ್ನೆ ಮುಸ್ಲಿಂ ಬಾಂಧವರ ಹಬ್ಬದ ಹಿನ್ನೆಲೆಯಲ್ಲಿ ರಜೆ ಕೊಡಲಿಲ್ಲ ಅನ್ನೊ‌ ಕಾರಣಕ್ಕೆ ಸಿಪಿಐ ಅವರನ್ನ ಎಲ್ಲರ ಎದುರೇ WPC ನಿಂದಿಸಿದ್ದಾರೆ. ಸಿಪಿಐ ಕ್ಯಾಬಿನ್ ಗೆ ನುಗ್ಗಿ ಫುಲ್ ಆವಾಜ್ ಹಾಕಿದ್ದಾರೆ. ಠಾಣೆಯ ಸಿಬ್ನಂದಿಗಳೆಲ್ಲ ಸಮಾಧಾನ ಮಾಡಿದರೂ ಕೂಲ್ ಆಗದ WPC, ಸಂಜೆಯೊಳಗೆ ನಿನಗೇನಾದರೂ ಆಗಲಿ ಎಂದು ಸಿಪಿಐಗೆ ಮಹಿಳಾ ಪೇದೆ ಶಾಪ ಹಾಕಿದ್ದಾರೆ. ಮಹಿಳಾ ಪೇದೆಯ ಈ ಆರ್ಭಟ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್‌ ಆಗಿದೆ. ಇದರಿಂದ ಪೋಲಿಸ್ ಇಲಾಖೆಯಲ್ಲಿನ ಗೊಂದಲಗಳು ಅಸಮಾಧಾನ, ಕೆಲ ಹಂತದ ಸಿಬ್ಬಂದಿಗೆ ಸಮಸ್ಯೆ ಹಾಗೂ ಮೇಲಾಧಿಕಾರಿಗಳಿಗೆ ಒತ್ತಡ ಎಲ್ಲವು ತಿಳಿದು ಬರುತ್ತೇ. ಆದ್ರೇ ಇಲಾಖೆಯಲ್ಲಿ ಉಪ ನಗರ ಠಾಣೆಯ ಸಿಪಿಐ ಡಿಸೋಜಾ ಒಬ್ಬ ಸಜ್ಜನ ಅಧಿಕಾರಿ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.

Share News

About admin

Check Also

Featured Video Play Icon

ವಿಮಾನ ನಿಲ್ದಾಣದಲ್ಲಿ ಹೆಚ್ಚಿದ ಭದ್ರತೆ: ಪ್ರಯಾಣಿಕರ ತಪಾಸಣೆಗೆ ಆದ್ಯತೆ..!

ಹುಬ್ಬಳ್ಳಿ: ದೆಹಲಿಯ ಕೆಂಪುಕೋಟೆ ಬಳಿ ಕಾರ್ ಸ್ಫೋಟ ಘಟನೆಯ ನಂತರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.ಬ್ಯೂರೊ ಆಫ್ ಸಿವಿಲ್ …

Leave a Reply

Your email address will not be published. Required fields are marked *