ಡಾ,ರಾಜ್ ಕುಮಾರ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಸಿನಿಮಾ ರಂಗದಲ್ಲೆ ಹಾಲಿಹುಡ್,ಟಾಲಿಹುಡ್,ಸ್ಯಾಂಡಲ್ ಹುಡ್ ಕಂಡಂತಹ ಅಭಿನಯ ಚತುರ ಹಿರಿಯ ನಟ. ಅದರಲ್ಲು ಅವರ ಜೀವನದಲ್ಲಿ ಎಂತಹ ಕಷ್ಟಗಳು ಎದುರಾದ್ರು , ಏಳು ಬೀಳುಗಳನ್ನ ಕಂಡರು ಅವರು ಯಾವದಕ್ಕು ತಲೆ ಬಾಗಲೆ ಇಲ್ಲ ತಮ್ಮ ತಾಳ್ಮೆಯನ್ನು ಕಳೆದು ಕೊಂಡಿಲ್ಲ. ಇದಕ್ಕೊಂದು ತಾಜಾ ಉದಾಹರಣೆ ಎಂಬಂತೆ ಡಾ.ರಾಜ್ ಕುಮಾರವರು ತಮ್ಮ ಹುಟ್ಟೂರು ಗಾಜನೂರಿಗೆ ತೆರಳಿದ್ದಾಗ, ಶ್ರೀಗಂಧದ ಕಳ್ಳ ಎಂದೆ ಕುಖ್ಯಾತಿ ಹೊಂದಿದ್ದ ಕಾಡುಗಳ್ಳ ವೀರಪ್ಪನ್, ಡಾ.ರಾಜ್ ಕುಮಾರರನ್ನು ಅಪಹರಿಸಿ ಮಳೆ, ಚಳಿ, ಬಿಸಿಲೆನ್ನದೆ ವೀರಪ್ಪನ್ ತನ್ನೊಂದಿಗೆ ಕಾಡಿನೊಳಗೆ ಬಂದಿಸಿ ಜೊತೆಯಲ್ಲಿ ಇಟ್ಟು ಕೊಂಡಿದ್ದಾಗ, ಯಾವುದನ್ನು ಲೆಕ್ಕಿಸದೆ ಕಾಡುಗಳ್ಳ ವೀರಪ್ಪನ್ ನೊಂದಿಗೆ ಹಲವು ದಿನಗಳನ್ನ ಕಳೆದ ಡಾ ರಾಜ್ ಯಾವುದಕ್ಕು ದೃತಿಗೆಡದೆ ತಮ್ಮ ಸೌಮ್ಯ ಸ್ವಭಾವದಿಂದಲೆ ವೀರಪ್ಪನ್ ಮನಸ್ಸನ್ನ ಗೆದ್ದು ಬಂದಿದ್ರು. ಅದು ಹೇಗೆ ಅಂದ್ರೆ ಅವರಲ್ಲಿ ಅಡಗಿದ್ದಂತ ಟಾಪ್ ಸೀಕ್ರೇಟೆ ಯೋಗ ! ಡಾ.ರಾಜ್ ರವರು ಪ್ರತಿನಿತ್ಯ ಚಿತ್ರೀಕರಣ ಸಂದರ್ಭದಲ್ಲು ಯೋಗ ಮಾಡುವುದನ್ನು ಮಾತ್ರ ಮರೆಯುತ್ತಿರಲಿಲ್ಲವಂತೆ. ಅವರು ಮಾಡುತ್ತಿದ್ದ ಯೋಗದಿಂದಲೆ ಅವರನ್ನು ಉನ್ನತ ಮಟ್ಟಕ್ಕೇರಲು ನೂರಾರು ದಾರಿಗಳು ಹುಟ್ಟಿ ಕೊಂಡಿದ್ದವಂತೆ. ಹಾಗಂತ ಹಿರಿಯ ಮಗ ರಾಘವೇಂದ್ರ ರಾಜ್ ಕುಮಾರ್ ರವರೆ ಕೆಲ ಮುಖ್ಯವಾಹಿನಿಗಳಲ್ಲಿ ತಿಳಿಸಿದ್ದಾರೆ. ಡಾ.ರಾಜ್ ರವರು ಬದುಕುಳಿದುದ್ದಕ್ಕು ಆರೋಗ್ಯವಾಗಿ, ಶಾಂತಿಯುತವಾಗಿ, ಸೌಮ್ಯವಾಗಿ,ಎಲ್ಲರೊಳೊಗೊಬ್ಬರಾಗಿ ಬಹುಕಾಲ ಯಶಸ್ಸನ್ನು ಕಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು , ಅವರು ಏಕಾಗ್ರತೆಯಿಂದ ಮಾಡುತ್ತಿದ್ದ ಯೋಗ. ಆ ಯೋಗದಿಂದಲೇ ಎಲ್ಲಾ ಯೋಗಗಳು ನನಗೆ ಕೂಡಿಬಂದವು ಎಂದು ಎಲ್ಲೋ ಒಂದು ಬಾರಿ ಅವರು ಹೇಳಿದ್ದು ಉಂಟು. ಹಾಗಾಗಿ ಯೋಗ ಮಾಡಿದರೆ ಯಾವುದೇ ರೋಗವಿಲ್ಲ ಅಂತ ಹಿರಿಯರು ಹೇಳುತ್ತಲೆ ಬಂದಿದ್ದಾರೆ. ಹಾಗಾಗಿ ಎಲ್ಲರು ಯೋಗ ಮಾಡಿ ಯೋಗಗಳನ್ನ ಪಡೆಯಿರಿ ಅನ್ನೋದು ಯೋಗಿಗಳ ಮಾತಾಗಿದೆ. ಹಾಗಿದ್ರೆ ನೋಡೋಣ ಬನ್ನಿ ಒಂದು ಬಾರಿ ಡಾ.ರಾಜ್ ರವರ ಯೋಗಾಸನಗಳ ಚಿತ್ರೀಕರಣವನ್ನ.
bigtvnews | Hubli Dharwad News | Kannada News | Karnataka News Hubli News | News In Hubli | Local news





