ಕೋಲಾರದ ಯರಗೋಳ್ ಗೆ ಸ್ಪೀಕರ್
ರಮೇಶ್ ಕುಮಾರ್ ನೇತೃತ್ವದಲ್ಲಿ ಜಿಲ್ಲೆಯ ಶಾಸಕರುಗಳು ಇಂದು ಭೇಟಿ ನೀಡಿದ್ದಾರೆ. 450 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮಳೆ ನೀರನ್ನು
ಹಿಡಿದಿಟ್ಟುಕೊಳ್ಳುವ ಡ್ಯಾಂ ಇದಾಗಿದ್ದು, ಕೋಲಾರ, ಬಂಗಾರಪೇಟೆ ಹಾಗೂ ಮಾಲೂರು ತಾಲೂಕುಗಳಿಗೆ
ಕುಡಿಯುವ ನೀರು ಒದಗಿಸುವ ಯೋಜನೆಯಾಗಿದೆ. ಇಂದು ಯರಗೋಳ್
ಡ್ಯಾಂ ಕಾಮಾಗಾರಿಯನ್ನ ಸ್ಪೀಕರ್
ರಮೇಶ್ ಕುಮಾರ್ ವಿಕ್ಷಣೆ ಮಾಡಿದರು.. ರಮೇಶ್ ಕುಮಾರ್ ಗೆ ಜಿಲ್ಲೆಯ
ಶಾಸಕರುಗಳು ಸಾಥ್ ನೀಡಿದರು. ನಂತರ ಮಾಧ್ಯಮರೊಂದಿಗೆ ಮಾತನಾಡಿದ
ಅವರು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಆಂಧ್ರ ನೀರು
ತರಲು ಕ್ರಮ ಕೈಗೊಳ್ಳಲಾಗಿದ್ದು, ಎರಡು ಜಿಲ್ಲೆಯ ಶಾಸಕರುಗಳ ನಿಯೋಗವನ್ನು ಆಂಧ್ರದ ಸಿಎಂ ಭೇಟಿ ಮಾಡಲು ನಿರ್ಧಾರ ಮಾಡಲಾಗಿದೆ. ಅವಿಭಜಿತ ಜಿಲ್ಲೆಯ ಗಡಿಭಾಗಗಳಿಗೆ ಕೃಷ್ಣಾ, ಗೋದಾವರಿ ನೀರಾವರಿ ಯೋಜನೆಗಳು ಆಗಮನವಾಗಲಿದ್ದು, ಎರಡು ಜಿಲ್ಲೆಗೆ 5 ಟಿಎಂಸಿ ನೀರು ಕೊಡುವಂತೆ ಆಂಧ್ರ ಸಿಎಂಗೆ ಮನವಿ
ಮಾಡಲು ನಿರ್ಧಾರಮಾಡಲಾಗಿದೆ.
ಹಾಗೂ ಯರಗೋಳ್ ಯೋಜನೆಯನ್ನ ಜನವರಿಗೆ ಪೂರ್ಣಗೊಳ್ಳಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





