Breaking News

ಮನೆಗೆ ಕನ್ನ ಹಾಕಿದ ಚಡ್ಡಿ ಬನಿಯನ್ ಗ್ಯಾಂಗ್ ನ ಕಳ್ಳರು

ಕಾಮತ್ ‌ಹೋಟೆಲ್ ಮಾಲೀಕ ರಘುರಾಮ ಕಾಮತ್ ಅವರ ಮನೆಗೆ ಚಡ್ಡಿ ಬನಿಯನ್ ಗ್ಯಾಂಗ್ ನ ಕಳ್ಳರು ಕನ್ನ ಹಾಕಿದ್ದಾರೆ. ಅಶೋಕ ನಗರದಲ್ಲಿರುವ ಮನೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.ನಿನ್ನೆ ರಾತ್ರಿ ಸುಮಾರು 2 .30 ಗಂಟೆಯ ಸುಮಾರಿಗೆ ಮನೆಯ ಗೇಟ್ ಮೂಲಕ ಒಳಪ್ರವೇಶ ಮಾಡಿದ ಮೂರ್ನಾಲ್ಕು ಜನರ ಗುಂಪು ಮನೆಯಲ್ಲಿ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.‌ ಕಳ್ಳರ ಗುಂಪಿನ ಸದಸ್ಯರು ಅರೆಬರೆ ಬಟ್ಟೆ ತೊಟ್ಟು, ಮುಖಕ್ಕೆ ಬಟ್ಟೆ ಕಟ್ಟಿಕೊಂಡಿರುವ ದೃಶ್ಯಗಳು ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿವೆ.‌ ಮನೆಯಲ್ಲಿ ಯಾರು‌ ಇಲ್ಲದನ್ನಹ ಖಚಿತಪಿಡಿಸಿಕೊಂಡು ಮನೆಗೆ ಕನ್ನ ಹಾಕಿದ್ದಾರೆ. ಮನೆಯಲ್ಲಿ‌ನ ಬ್ಯುರೋ ಒಡೆದು ಅಪಾರ‌ ಪ್ರಮಾಣದ ‌ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾರೆ.ಬೆರಳಚ್ಚು ತಜ್ಞರು, ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About admin

Check Also

Featured Video Play Icon

ವಿಮಾನ ನಿಲ್ದಾಣದಲ್ಲಿ ಹೆಚ್ಚಿದ ಭದ್ರತೆ: ಪ್ರಯಾಣಿಕರ ತಪಾಸಣೆಗೆ ಆದ್ಯತೆ..!

ಹುಬ್ಬಳ್ಳಿ: ದೆಹಲಿಯ ಕೆಂಪುಕೋಟೆ ಬಳಿ ಕಾರ್ ಸ್ಫೋಟ ಘಟನೆಯ ನಂತರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.ಬ್ಯೂರೊ ಆಫ್ ಸಿವಿಲ್ …

Leave a Reply

Your email address will not be published. Required fields are marked *