ಟ್ರಾಕ್ಟರ್ ಹರಿದು
ಬೈಕ್ ಸವಾರ ಸ್ಥಳದಲ್ಲೇ ಸಾವನ್ನಾಪ್ಪಿದ
ಘಟನೆ ಬೆಳಗಾವಿ ಜಿಲ್ಲೆಯ
ಸವದತ್ತಿ ತಾಲೂಕಿನ ಕಡಬಿ ಬಳಿಯ ಮಾಡಮಗೇರಿ ಯರಗಣವಿ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ರಾಮದುರ್ಗ
ತಾಲೂಕಿನ ಚುಂಚನೂರ ಗ್ರಾಮದ ಮಹಾದೇವ ಬೆಳ್ಳಿವರಿ ಸ್ಥಳದಲ್ಲೇ ಸಾವನ್ನಾಪ್ಪಿದ್ದು, ಮೊಮ್ಮಗಳನ್ನು ವಸತಿ ಶಾಲೆಗೆ ಬಿಡಲು
ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಮೊಮ್ಮಗಳು ಪ್ರಾಣಾಪಾಯದಿಂದ ಪಾರಾಗಿದ್ದು ಕೈಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಅಪಘಾತ ಸಂಬವಿಸಿದ ಕೂಡಲ್ಲೆ ಟ್ರಾಕ್ಟರ್ ಚಾಲಕ ಪರಾರಿಯಾಗಿದ್ದು, ಯರಗಟ್ಟಿ ಪೊಲೀಸರು
ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಪೋಲಿಸರು ಆರೋಪಿಗಾಗಿ ಬಲೆ ಬೀಸಿದ್ದು, ಈ ಕುರಿತು ಯರಗಟ್ಟಿ
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





