Breaking News

ಐಎಂಎ ಜ್ಯುವೆಲ್ಲರಿ ಮಾಲೀಕ ಮನ್ಸೂರ್ ನ ನೆರಳು ಚಿತ್ರದುರ್ಗಕ್ಕೂ ಹರಡಿದೆ

ಭಾರೀ ವಂಚನೆ ಮಾಡಿದ ಐಎಂಎ ಜ್ಯುವೆಲ್ಲರಿ ಮಾಲೀಕ ಮನ್ಸೂರ್ ನ ನೆರಳು ಚಿತ್ರದುರ್ಗಕ್ಕೂ ಹರಡಿದೆ. ಐಎಂಐ ವಂಚನ ಜಾಲಕ್ಕೆ ಸಿಲುಕಿ ನೂರಾರು ಜನರು ಈಗ ಎಚ್ಚೆತ್ತು
ಬೀದಿಗೆ ಬಂದು ಹೇಳಿಕೆ ನೀಡುತ್ತಿದ್ದಾರೆ. ಪ್ರಮುಖವಾಇ ಬೆಂಗಳೂರು ಅಷ್ಟೇ ಅಲ್ಲದೇ ಕೋಟೆನಾಡಿನ ಸುಮಾರು 150ಕ್ಕೂ ಹೆಚ್ಚು ಜನ ಹೂಡಿಕೆ ಮಾಡಿದ್ದಾರೆ. ಏಜೆಂಟ್
ನೂರುಲ್ಲಾ ಮುಖಾಂತ್ರ ಹಣವನ್ನು ಬ್ಯಾಂಕ್
ಮುಖಾಂತ್ರ ನೆಫ್ಟ್ ಮಾಡಿದ್ದಾರೆ. ಅತೀ ಹೆಚ್ಚಿನ ಮಹಿಳೆಯರೇ ಹೂಡಿಕೆ ಮಾಡಿದ್ದಾರೆ.
ಅಷ್ಟಕ್ಕೂ ವಂಚನೆಯ ಬಗ್ಗೆ ನೋಡುವುದಾದ್ರೇ ಐಎಂಎ ಜ್ಯುವೆಲ್ಸ್ ಚಿನ್ನ ಖರೀದಿಸುವ
ಗ್ರಾಹಕರಿಗೆ ಮೇಕಿಂಗ್ ಹಾಗೂ ವೇಸ್ಟೇಜ್ ಶುಲ್ಕ ವಿಧಿಸುತ್ತಿರಲಿಲ್ಲ. ಈ ಪ್ರಕಟಣೆ ನೋಡಿ ಜನ
ಚಿನ್ನ ಖರೀದಿ ಮಾಡುತ್ತಿದ್ದರು. ಖರೀದಿಗೆ ಬಂದ ಗ್ರಾಹಕರಿಗೆ ಕಂಪನಿಯಲ್ಲಿ ಹಣ ಹೂಡುವಂತೆ
ಸಿಬ್ಬಂದಿ ಹೇಳುತ್ತಿದ್ದರು. ಜ್ಯುವೆಲ್ಸ್ ಸಿಬ್ಬಂದಿಯ ಮಾತಿಗೆ ಮರುಳಾದ
ಜನ ತಮ್ಮಲ್ಲಿದ್ದ ಹಣವನ್ನು ಹೂಡಿಕೆ ಮಾಡುತ್ತಿದ್ದರು. 1 ಲಕ್ಷಕ್ಕೆ. 3 ಸಾವಿರ ರೂ. ನಂತೆ ಕಂಪನಿ ಬಡ್ಡಿ ನೀಡುತಿತ್ತು. ಕಂಪನಿ ಸರಿಯಾದ
ಸಮಯದಲ್ಲಿ ಲಾಭಾಂಶ ನೀಡುತ್ತಿದ್ದ ಕಾರಣ ವಿಶ್ವಾಸಾರ್ಹತೆ ಗಳಿಸಿಕೊಂಡಿತ್ತು. ಲಾಭಾಂಶ ಪಡೆದ
ಗ್ರಾಹಕರು ಸ್ನೇಹಿತರಿಗೆ ಹೇಳುತ್ತಿದ್ದ ಕಾರಣ ಅವರು ಹೂಡಿಕೆ ಮಾಡತೊಡಗಿದರು. ಆದರೆ ಕಳೆದ 2-3 ತಿಂಗಳಿನಿಂದ ಸಂಸ್ಥೆ ಬಡ್ಡಿ ನೀಡಿರಲಿಲ್ಲ.
ಈ ನಡುವೆ ಜೂನ್ 10 ರಂದು ಸಂಪೂರ್ಣ ಹಣ
ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಜೂ.9 ರಂದು ಮಾಲೀಕ ಮನ್ಸೂರ್ ಅಲಿ ಖಾನ್ ಆತ್ಮಹತ್ಯೆಯ ವಿಡಿಯೋ ವೈರಲ್ ಆದ ಬಳಿಕ ಮಳಿಗೆಯ ಮುಂದೆ
ಜನರು ಜಮಾಯಿಸಿ ಹೂಡಿದ್ದ ಹಣವನ್ನು ಕೇಳಲು ಆರಂಭಿಸಿದ್ದಾರೆ.

Share News

About admin

Check Also

ಬೈಕ್ ಡಿಕ್ಕಿ ಸ್ಥಳದಲ್ಲಿ ನಾಲ್ವರ ಯುವಕರ ಸಾವು!

ಹಾಬಳ ಗ್ರಾಮದಿಂದ ಬರುತ್ತಿದ್ದ ಬೈಕ್ ಗೆಸೇಡಮ್ ಕಡೆಯಿಂದ ಹೊರಟಿದ್ದ ಬೈಕ್ ಇಂದ್ ಅತೀ ವೇಗದಿಂದ ಬಂದು ಗುದ್ದಿದೆ. ಅಪಘಾತದ ತೀವ್ರತೆಗೆ …

Leave a Reply

Your email address will not be published. Required fields are marked *