Breaking News

ಆಸ್ತಿಗಾಗಿ ಬೀದಿಗೆ ಬಂದ ಅತ್ತೆ ಸೊಸೆ ಜಗಳ

ಬೆಳಗಾವಿ ಮಾಜಿ ಶಾಸಕನ ಆಸ್ತಿಗಾಗಿ ಕುಟುಂಬಸ್ಥರ ಕಿತ್ತಾಟ ಈಗ ರಸ್ತೆಗೆ ಬಂದು ನಿಂತಿದೆ. ಎಂಇಎಸ್ ಮಾಜಿ ಶಾಸಕ ದಿ. ಸಂಭಾಜೀ ಪಾಟೀಲ್ ಗೆ ಸೇರಿದ ಆಸ್ತಿಗಾಗಿ ಸಂಭಾಜೀ ಪತ್ನಿ ಉಜ್ವಲಾ ಪಾಟೀಲ್ ಹಾಗೂ ಸೊಸೆ ನಡುವೆ ಜಗಳ ಎದಿದ್ದು, ಅತ್ತೆ ಬಂದೂಕು ತೋರಿಸಿ ಹೆದರಿಸುತ್ತಿದ್ದಾಳೆ ಎಂದು ಸೊಸೆ ಆರೋಪ ಮಾಡಿದ್ದಾರೆ. ಈ ಒಂದು ಗಲಾಟೆ ಬೆನಕನಹಳ್ಳಿ ಗ್ರಾಮದ ಫಾರ್ಮ್ ಹೌಸ್ ಬಳಿ ಮಾಡಿಕೊಂಡಿದ್ದಾರೆ. ಸಂಭಾಜೀ ಪಾಟೀಲ್ ಎರಡನೇ ಸೊಸೆ ಸಾಧನಾ ಸಾಗರ್ ಪಾಟೀಲ್ ಗಲಾಟೆ ಮಾಡಿದ್ದು, ಅತ್ತೆ ಉಜ್ವಲಾ ಪಾಟೀಲ್ ಮನೆಯಿಂದ ಹೊರ ಹಾಕಿದ್ದಾರೆ ಎಂದು ಆರೋಪ ಮಾಡಿ ಗಲಾಟೆ ಮಾಡಿದ್ದಾರೆ. ಇದರ ಹಿನ್ನೆಲೆಯಲ್ಲಿ ಖಾಸಗಿ ಭದ್ರತಾ ಪಡೆಯಿಂದ ಪಾಟೀಲ್ ಮನೆಗೆ ಸ್ಥಳೀಯ ಭದ್ರತಾ ಸಂಸ್ಥೆ ಬಿಗಿ ಬಂದೋಬಸ್ತ್ ನೀಡಲಾಗಿದ್ದು, ಮನೆಯಲ್ಲಿ ಇಟ್ಟಿದ್ದ ಬಂದೂಕ್ ನ್ನು ಗ್ರಾಮೀಣ ಪೋಲೀಸ್ರು ತಮ್ಮ ವಶಕ್ಕೆ ಪಡೆದಿದ್ದಾರೆ.

Share News

About admin

Check Also

ರಾಜ್ಯಪಾಲರ ಹೆಸರಿನಲ್ಲಿದ್ದ ಐದೂವರೆ ಎಕರೆ ಜಮೀನು ಭೂಗಳ್ಳರ ಪಾಲು.!

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿಯಲ್ಲಿರುವ ಸರ್ವೇ ನಂ.221/1ಬ 19 ಎಕರೆ 30 ಗುಂಟೆ ಸಾಗುವಳಿ ಜಮೀನಿನ ಪೈಕಿ …

Leave a Reply

Your email address will not be published. Required fields are marked *