Breaking News

ಸುದ್ದಿ ವಾಹಿನಿಯ ವರದಿಗಾರ, ಕ್ಯಾಮೆರಾಮನ್ ಗಳ ಮೇಲೆ ಹಲ್ಲೆ

ಕಾರ್ಖಾನೆಗಳಿಂದ ವಾತಾವರಣ ಕಲುಶಿತ ಗೊಳ್ಳುತ್ತಿರುವ ಬಗ್ಗೆ ವರದಿ ಮಾಡಲು ತೆರಳಿದ್ದ ಖಾಸಗಿ ಸುದ್ದಿ ವಾಹಿನಿಯ ವರದಿಗಾರರು, ಕ್ಯಾಮೆರಾಮನ್ ಗಳ ಮೇಲೆ ಕಾರ್ಖಾನೆಯ ನೌಕರರು ಏಕಾಏಕಿ ಹಲ್ಲೆ ನಡೆಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಪಬ್ಲಿಕ್ ಟಿ ವಿ ವರದಿಗಾರ ಮಂಜುನಾಥ್ ತಾಳಮಕ್ಕಿ, ರಾಜ್ ನ್ಯೂಸ್ ವರದಿಗಾರ ಮಹೇಶ್, ಹಾಗೂ ಕ್ಯಾಮೆರಾಮನ್ ದೇವರಾಜು, ಸಮಯ ಟಿವಿ ಕ್ಯಾಮೆರಾಮನ್ ಚಂದನ್ ಹಲ್ಲೆಗೊಳಗಾದವರು. ನಗರದ ಹೊರವಲಯದ ಸತ್ಯಮಂಗಲ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಬೇಳೂರು ಬಾಯರ್ ಕಾರ್ಖಾನೆ ನೌಕರರು ಹಲ್ಲೆ ನಡೆಸಿದ್ದಾರೆ. ಇತ್ತೀಚೆಗಷ್ಟೇ ಕಾರ್ಖಾನೆ ಯಲ್ಲಿ ಬಾಯ್ಲರ್ ಸ್ಪೋಟಗೊಂಡು ನಾಗರಿಕರೊಬ್ಬರು ಗಾಯಗೊಂಡಿದ್ದರು. ಇದರಿಂದ ಕಾರ್ಖಾನೆ ಸುತ್ತ ವಿಷಾನಿಲ ಆವರಿಸಿತ್ತು. ಈ ಕುರಿತಂತೆ ಸುತ್ತಮುತ್ತಲ ಗ್ರಾಮಸ್ಥರು ಕಾರ್ಖಾನೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದರು. ಜೂ.11 ರಂದು ಕಾರ್ಖಾನೆಯ ಸಿಬ್ಬಂದಿ ನೌಕರರು ಫ್ಯಾಕ್ಟರಿ ಮುಚ್ಚುತ್ತದೆ ಎಂಬ ಬೀತಿಯಿಂದ ಬಾಕಿ ಸಂಭಳ, ಭತ್ಯೆ ಇತರೆ ಬೇಡಿಕೆ ಗಳನ್ನ ಹೀಡೆರಿಸುವಂತೆ ಕಾರ್ಖಾನೆ ಮುತ್ತಿಗೆ ಹಾಕಿ ಪ್ರತಿಭಟಿಸುತ್ತಿದ್ದರು. ಇದೆ ವೇಳೆ ಮಾಧ್ಯಮ ವರದಿಗಾರರು ಕ್ಯಾಮೆರಾಮನ್ ಗಳು ವಾತವರಣ ಕಲುಶಿತ ಗೊಳ್ಳುತ್ತಿರುವ ಬಗ್ಗೆ ಹಾಗೂ ಕಾರ್ಖಾನೆಗಳ ಸ್ಥಳಾಂತರ ಕುರಿತಂತೆ ವಿಸೃತವಾಗಿ ವರದಿ ಮಾಡಲು ಸ್ಥಳಕ್ಕೆ ತೆರಳಿದ್ದಾರೆ. ಮಾದ್ಯಮದ ಕ್ಯಾಮೆರಾಗಳನ್ನ ಕಂಡ ನೌಕರರು ಇದ್ದಕ್ಕಿದ್ದಂತೆ ಕ್ಯಾಮೆರಾಮನ್ ಗಳು ವರದಿಗಾರರ ಮೇಲೆ ಹಲ್ಲೆ ನಡೆಸಿದ್ದಾರೆ‌‌. ರಾಜ್ ನ್ಯೂಸ್ ವರದಿಗಾರ ದೇವರಾಜು, ಕ್ಯಾಮೆರಾಮನ್ ಚಂದನ್ ಗೆ ಮನಬಂದಂತೆ ತಳಿಸಿದ್ದಾರೆ. ರಾಜ್ ನ್ಯೂಸ್ ವರದಿಗಾರ ಮಹೇಶ್ ಹಾಗೂ ಪಬ್ಲಿಕ್ ಟಿವಿ ವರದಿಗಾರ ಮಂಜುನಾಥ್ ತಾಳಮಕ್ಕಿ ಮೇಲೂ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದವರನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕಂಪನಿಯ ಎಚ್ ಆರ್ ವೆಂಕಟರಾಮನ್ ಪ್ರಚೊಧನೆಯಿಂದ ನೌಕರರು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಡಿಸಿಎಂ ಪರಮೇಶ್ವರ್ ,ಶಾಸಕ ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ ನಿ ಪುರುಷೋತ್ತಮ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ರು. ಘಟನೆ ಸಂಬಂಧ ಈಗಾಗಲೇ ನಾಲ್ವರನ್ನ ಬಂದಿಸಿರುವ ಪೋಲಿಸರು ತನಿಖೆ ಮುಂದುವರಿಸಿದ್ದಾರೆ.

Share News

About admin

Check Also

ಮೈಸೂರುನಲ್ಲಿ ಸ್ಫೋಟಕಗಳು ಪತ್ತೆ

ಮೈಸೂರು: ಸ್ಫೋಟಕಗಳು ಪತ್ತೆಯಾಗಿರುವ ಘಟನೆ ಟಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗೇಟ್ ಬಳಿಯ ಹೋಟೆಲ್ ವೊಂದರಲ್ಲಿ ನಡೆದಿದೆ. ಅಪರಿಚಿತರು ನೀಲಿ ಬಣ್ಣದ …

Leave a Reply

Your email address will not be published. Required fields are marked *