Breaking News

ಅರಣ್ಯ ಇಲಾಖೆಯು ಇಟ್ಟಿದ್ದ ಬೋನಿಗೆ ಬಿದ್ದ 3 ವರ್ಷದ ಗಂಡು ಚಿರತೆ

ರೈತರ ಮನೆಗಳು ಹಾಗೂ ಕೊಟ್ಟಿಗೆಯ ಮೇಲೆ ದಾಳಿ ನಡೆಸಿ ಆಡು ಕುರಿಗಳು ಸೇರಿದಂತೆ ದನಕರುಗಳನ್ನು ತಿಂದು ಪರಾರಿಯಾಗಿ ಜನಸಾಮಾನ್ಯರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆಯು ಇಂದು ಬೆಳಿಗ್ಗೆ ಅರಣ್ಯ ಇಲಾಖೆಯ ಸಿಬ್ಬಂಧಿಗಳು ಇಟ್ಟಿದ್ದ ಬೋನಿಗೆ ಬಿದ್ದು ಸೆರೆಯಾಗಿದೆ. ಮಂಡ್ಯ ಜಿಲ್ಲೆಯ ಇತಿಹಾಸ ಪ್ರಸಿದ್ಧವಾದ ಪುಣ್ಯಕ್ಷೇತ್ರ ಶ್ರೀ ಭೂವರಹಾನಾಥ ದೇವಸ್ಥಾನಕ್ಕೆ ಕೇವಲ ಎರಡು ಕಿ.ಮೀ ದೂರದಲ್ಲಿ ಈ ಘಟನೆಯು ನಡೆದಿದೆ. ಅರಣ್ಯ ಇಲಾಖೆಯು ಇಟ್ಟಿದ್ದ ಬೋನಿಗೆ ಬಿದ್ದಿರುವ ಚಿರತೆಯನ್ನು ಮಲೈ ಮಹದೇಶ್ವರ ವನ್ಯಜೀವಿ ವಲಯ ಅರಣ್ಯಕ್ಕೆ ಬಿಡುವುದಾಗಿ ಕೆ.ಆರ್.ಪೇಟೆ ತಾಲ್ಲೂಕು ವಲಯ ಅರಣ್ಯಾಧಿಕಾರಿ ಎಂ.ಎನ್.ಮಧುಸೂದನ್ ತಿಳಿಸಿದ್ದಾರೆ. ತಾಲ್ಲೂಕಿನ ಅರಣ್ಯದಂಚಿನ ಗ್ರಾಮಗಳಲ್ಲಿ ಚಿರತೆ ದಾಳಿಯು ನಿರಂತರವಾಗಿ ನಡೆಯುತ್ತಿದೆ. ಬೋನುಗಳ ಕೊರತೆಯಿಂದ ಕಾರ್ಯಾಚರಣೆಗೆ ತಡವಾಗುತ್ತಿದೆ. ರೈತರು ಚಿರತೆಗಳ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಸಹಕರಿಸಬೇಕು ಎಂದು ಮಧುಸೂದನ್ ಮನವಿ ಮಾಡಿದ್ದಾರೆ.

Share News

About admin

Check Also

ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟ ‘ASI’ ಮಗಳು.ದುರಂತ ಕಾರಣ.!

ಬಂದೀಗೌಡ ಬಡಾವಣೆ ಸಮೀಪ ಈ ಒಂದು ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಸುಹಾನ ಎಂದು ಗುರುತಿಸಲಾಗಿದೆ. ಮಂಡ್ಯದಲ್ಲಿ ಘೋರ …

Leave a Reply

Your email address will not be published. Required fields are marked *