ಅರಣ್ಯಾಧಿಕಾರಿಗಳ ವಾಹನಕ್ಕೆ ಟೆಂಪೋ ಟ್ರಾಲೆಲ್ ಡಿಕ್ಕಿ ಹೊಡೆದ ಘಟನೆ ಶಿಡ್ಲಘಟ್ಟ ತಾಲ್ಲೂಕಿನ ಅಂಡಿಗನಾಳ ಕ್ರಾಸ್ ಕೆರೆ ಕಟ್ಟೆಯ ಮೇಲೆ ಸಂಭವಿಸಿದೆ. ಅರಣ್ಯಾಧಿಕಾರಿಗಳ ಬಲೇರೋ ವಾಹನ ಅಪಘಾತಕ್ಕೆಗೀಡಾಗಿದ್ದು, ರಸ್ತೆಯ ಮದ್ಯದ ವಿದ್ಯುತ್ ಕಂಬಕ್ಕೆ ಟಿಟಿ ವಾಹನ ಡಿಕ್ಕಿ ಹೊಡೆದಿದೆ. ಈ ವೇಳೆ ಅರಣ್ಯಾಧಿಕಾರಿಗಳ ಸರ್ಕಾರಿ ವಾಹನ ಸಂಪೂರ್ಣ ಜಖಂ ಆಗಿದ್ದು, ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ .ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





