ಆಶಾ ಅವರು ಖಾಸಗಿ ಶಾಲೆಯೊಂದರ ಬಸ್ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದರು. ಈಕೆಯಿಂದ ಅನಿಲಾಸನ್ ಎಂಬಾತ 50 ಸಾವಿರ ರೂ. ಸಾಲ ಪಡೆದಿದ್ದ. ಆದರೆ ಸಾಲದ ಹಣ ಮರಳಿಸಿದೇ ಸತಾಯಿಸುತ್ತಿದ್ದ. ಹಲವರ ಸಮ್ಮುಖದಲ್ಲಿ ಈ ಜಗಳ ಇತ್ಯರ್ಥಗೊಂಡು ಅನಿಲಾಸನ್ ಹಣ ಮರಳಿಸಬೇಕೆಂದು ತಾಕೀತು ಮಾಡಲಾಗಿತ್ತು. ಎರಡು ದಿನದ ಹಿಂದೆ ಹಣ ನೀಡುವುದಾಗಿ ಕರೆ ಮಾಡಿದ್ದ ಅನಿಲಾಸನ್ ಕೆಂಗುಂಟೆ ಅರಣ್ಯ ಪ್ರದೇಶದ ಬಳಿ ಬರಲು ಹೇಳಿದ್ದ. ಅಲ್ಲಿ ಆಕೆಯನ್ನು ಹತ್ಯೆಗೈಯಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

