ಧಾರವಾಡ :ನಗರದ ಶಾಲಾ ವಾಹನ ತಪಾಸಣೆ ಹಾಗೂ ಜಿಲ್ಲಾ ಆಟೋ ರೀಕ್ಷಾ ಚಾಲಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಆಟೋ ರಿಕ್ಷಾ ಚಾಲಕರ ಅಭಿವೃದ್ಧಿ ಸಂಘದ ನೂರಾರು ಚಾಲಕರು ಪ್ರತಿಭಟನೆ ನಡೆಸಿದರು.ಸುಮಾರು ವರ್ಷಗಳಿಂದ ನಗರದಲ್ಲಿ ಆಟೋ ರೀಕ್ಷಾ ಹಾಗೂ ವ್ಯಾನ ಚಾಲಕರು ಶಾಲಾ ಮಕ್ಕಳನ್ನು ಕರೆದೊಯ್ಯುವ ಕಾರ್ಯದಲ್ಲಿ ತಮ್ಮ ತಮ್ಮ ಕುಟುಂಬ ಸಲುಹುದು ಹಾಗೂ ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ನಿಭಾಯಿಸಿ ತಮ್ಮ ಜೀವನವನ್ನು ಕಟ್ಟಿಕೊಂಡಿರುವ ಈ ಆಟೋ ಚಾಲಕರು , ಶಾಲಾ ಮಕ್ಕಳನ್ನು ಕರೆದೊಯ್ಯುವ ಕಾಯಕವನ್ನೇ ಮಾಡಿಕೊಂಡಿದ್ದು ,ಕಳೆದ 2 ತಿಂಗಳುಗಳಿಂದ ಮಾನ್ಯ ಸುಪ್ರಿಂಕೋರ್ಟ ಆದೇಶವನ್ನು ತಾವುಗಳು ಎತ್ತಿ ಹಿಡಿದಿದ್ದು ಆ ಆದೇಶದಲ್ಲಿ ಹೆಚ್ಚು ಮಕ್ಕಳನ್ನು ಕರೆದೊಯ್ಯುವ ಆಟೋ ಹಾಗೂ ವ್ಯಾನಗಳನ್ನು ತಪಾಸಣೆ ಮಾಡುತ್ತಿದ್ದು , ತಪಾಸಣೆಯಲ್ಲಿ ಹಲವು ಆಟೋ ರೀಕ್ಷಾ ಚಾಲಕರು ಕಾನೂನು ವ್ಯಾಪ್ತಿಗೆ ಬರುವಂತಹ 6 ಶಾಲಾ ಮಕ್ಕಳನ್ನು ಕರೆದೊಯ್ಯುವ ಆಟೋ ಚಾಲಕರು ಮಾಡುತ್ತಿದ್ದಾರೆ . ನಿಯಮ ಉಲ್ಲಂಘನ ಮಾಡದೇ ಸರಿಯಾದ ಕ್ರಮದಲ್ಲಿ ನಡೆಸಿಕೊಂಡು ಹೋಗುತ್ತಾ ಇದ್ದಾರೆ . ಇತ್ತೀಚಿನ ದಿನಗಳಲ್ಲಿ ಸಂಚಾರಿ ಪೋಲಿಸರು ಪ್ರತಿದಿನ ವಾಹನಗಳನ್ನು ತಡೆದು ತಪಾಸಣೆ ಮಾಡುತ್ತಿದ್ದು , ಶಾಲೆಗೆ ಹೋಗುವ ಮಕ್ಕಳ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ.ಅದೇ ರೀತಿ ಸಾರಿಗೆಯ ಇಲಾಖೆ , ಅಧಿಕಾರಿಗಳು ಅದೇ ರೀತಿ ಬೆಳಗಿನ ಜಾವಾ ಶಾಲೆಗೆ ಹೋಗುವ ಮಕ್ಕಳ ವಾಹನಗಳನ್ನು ತಡೆದು ತಪಾಸಣೆ ನೆಪದಲ್ಲಿ ಕಿರುಕುಳ ನೀಡುತ್ತಿದ್ದು ಮಕ್ಕಳ ಸಮಯ ವ್ಯರ್ಥ ಮಡುವುದರೊಂದಿಗೆ ಚಾಲಕರಿಗೆ ತೊಂದರೆಯಾಗುತ್ತಿದೆ ಎಂದು ಆಗ್ರಹಿಸಿದರು.ಈ ಕೂಡಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಇದನ್ನು ನಿಲ್ಲಿಸಬೇಕು. ಸುಪ್ರೀಂಕೋರ್ಟಿನ ಆದೇಶವನ್ನು ಆಟೋ ರೀಕ್ಷಾ ಚಾಲಕರು ತಪ್ಪದೇ ಅದನ್ನು ಪಾಲಿಸಲು ನಾವೆಲ್ಲರೂ ಸಿದ್ಧರಿದ್ದೇವೆ ತಾವುಗಳು ಆಟೋ ರೀಕ್ಷಾ ಚಾಲಕರ ಕುಟುಂಬದ ಪರಿಸ್ಥಿತಿಯನ್ನು ಸೂಕ್ತವಾಗಿ ಪರಿಗಣಿಸಬೇಕೆಂದು ಆಗ್ರಹಿಸಿದರು.ಬೇಡಿಕೆಗಳಾದ : ಹಳೆಯ ಆಟೋ ರೀಕ್ಷಾ ಪರಮಿಟ್‌ಗಳನ್ನು ನವೀಕರಿಸಬೇಕು,ಆಟೋ ರೀಕ್ಷಾ ಚಾಲಕರಿಗೆ ವಿದ್ಯಾರ್ಹತೆ ಕಡ್ಡಾಯ ಇಲ್ಲದ್ದರಿಂದ ಎಲ್ಲರಿಗೂ ಬಾಡ್ಜ್ ಲೈಸೆನ್ಸ್ ನೀಡಬೇಕು.ನಗರದಲ್ಲಿ ಆಟೋ ರೀಕ್ಷಾಗಳಿಗೆ ಒಂದೇ ಎಲ್.ಪಿ.ಜಿ ಬಂಕ ಇದ್ದು,ಹೆಚ್ಚು ಬಂಕಗಳನ್ನು ಒದಗಿಸಬೇಕು.ಹಳೆಯ ಆಟೋ ರೀಕ್ಷಾಗಳನ್ನು ಗುಜರಿಗೆ ಹಾಕಬೇಕೆಂದು ಮಾನ್ಯ ಆರ್ ಟಿ ಒ ಅಧಿಕಾರಿಗಳು ನಿಗದಿ ಪಡಿಸಿರುವ ಮೊತ್ತ ಎಷ್ಟೆಂದೂ ತಿಳಿಯದೇ ಗೊಂದಲದಲ್ಲಿದ್ದು,ನಮಗೆ ಸರಿಯಾದ ಮಾಹಿತಿ ನೀಡಿಲ್ಲಾ ಹಾಗೂ ನಮ್ಮ ಸಂಘದ ಪರವಾಗಿ 50 ಸಾವಿರ ಮೊತ್ತ ನಿಗದಿ ಪಡಿಸಬೇಕು ಹಾಗೂ ಆರ್ ಟಿ ಒ ಹಾಗೂ ಸಂಚಾರಿ ಪೋಲಿಸರು ದಿನಪ್ರತಿ ಶಾಲಾ ವಾಹನಗಳ ತಪಾಸಣೆ ನೆಪದಲ್ಲಿ ಕಿರುಕುಳ ಕೊಡುವುದನ್ನು ನಿಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ಜಿಲ್ಲಾ ಆಟೋ ರೀಕ್ಷಾ ಚಾಲಕರ ಅಭಿವೃದ್ಧಿ ಸಂಘದ ಅಧ್ಯಕ್ಷ ಜೀವನ ಹುತ್ಕೊರಿ, ಕಾರ್ಯಾಧ್ಯಕ್ಷ ವ್ಹಿ.ಬಿ.ಸಂಜೀವಪ್ಪನವರ, ಸುರೇಶ್ ರಾಠೋಡ,ಉಪಾಧ್ಯಕ್ಷ ಮಾರುತಿ ಪ್ರಭಾಕರ ,ಸೇರಿದಂತೆ ನೂರಾರು ಆಟೋ ಚಾಲಕರ ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





