Breaking News

ಶಾಯ್​ ಹೋಪ್​​ ಭರ್ಜರಿ ಆಟ​

ಟೌಂಟನ್​: ಶಾಯ್​​ ಹೋಪ್​​​​​​(96), ಇವಿನ್​​ ಲೆವಿಸ್​​ (70) ಹಾಗೂ ಶಿಮ್ರೋನ್​​ ಹೇಟ್ಮೆರ್​​ ಅವರ ಅರ್ಧ ಶತಕಗಳ ನೆರವಿನಿಂದ ವೆಸ್ಟ್​​ ಇಂಡೀಸ್​​​​ ವಿಶ್ವಕಪ್​ನ 23ನೇ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ 322 ರನ್​ಗಳ ಗುರಿ ನೀಡಿತು. ತಂಡ 50 ಓವರ್​ಗಳಲ್ಲಿ 8 ವಿಕೆಟ್​​ ನಷ್ಟಕ್ಕೆ 321 ಮೊತ್ತ ಕಲೆ ಹಾಕಿತು.ಇಲ್ಲಿನ ದಿ ಕಾಪರ್​​​​ ಆಸೋಸಿಯೇಷನ್​​ ಕೌಂಟಿ ಕ್ರೀಡಾಂಗಣದಲ್ಲಿ ಟಾಸ್​​ ಸೋತು ಬ್ಯಾಟಿಂಗ್​ ಮಾಡಿದ ವಿಂಡೀಸ್​ ಎದುರಾಳಿ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿದರು. ಆರಂಭಿಕರಾಗಿ ಕ್ರೀಸ್​ಗೆ ಆಗಮಿಸಿದ ಸ್ಫೋಟಕ ಬ್ಯಾಟ್ಸ್​ಮನ್​ ಕ್ರಿಸ್​​ ಗೇಲ್​​​​ ತೀರಾ ಕಳಪೆ ಆಟದೊಂದಿಗೆ ಶೂನ್ಯಕ್ಕೆ ಔಟಾದರು.ಮತ್ತೊಬ್ಬ ಆರಂಭಿಕ ಇವಿನ್​ ಲೆವಿಸ್​ (70), ಶಾಯ್​ ಹೋಪ್​​ (96) ಹಾಗೂ ಶಿಮ್ರೋನ್​​ ಹೇಟ್ಮೆರ್​​​​​​​ (50) ಉತ್ತಮ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಹೆಚ್ಚಿನ ಮೊತ್ತದ ಕೊಡುಗೆ ನೀಡಿದರು. ಬಳಿಕ ಬಂದ ನಾಯಕ ಜೇಸನ್​​ ಹೋಲ್ಡರ್​​​ (33) ಸಾಧಾರಣ ಆಟವಾಡಿ ಶೀಘ್ರ ವಿಕೆಟ್​ ಕಳೆದುಕೊಂಡರು.ಬಾಂಗ್ಲಾ ಪರ ಬೌಲಿಂಗ್​ ಮಾಡಿದ ಮೊಹಮ್ಮದ್​​​ ಶೈಫುದ್ದೀನ್​​​​​ ಹಾಗೂ ಮುಶ್ಫಿಕ್ಯೂರ್​ ರಹೀಮ್​​ ತಲಾ 3 ವಿಕೆಟ್​​ ಕಬಳಿಸಿದರೆ, ಶಕೀಬ್​ ಆಲ್​​ ಹಸನ್​​ ಎರಡು ವಿಕೆಟ್​​ ತನ್ನದಾಗಿಸಿಕೊಂಡರು.

Share News

About admin

Check Also

IPL 2025 : ಮೊದಲ ಪಂದ್ಯದಲ್ಲಿ ಗೆದ್ದು ಬಿಗಿದ ಆರ್‌ಸಿಬಿ

ಐಪಿಎಲ್ 2025ರ ಭಾಗವಾಗಿ ಆರ್ ಸಿ ಬಿ ವಿರುದ್ಧ ಪಂದ್ಯದಲ್ಲಿ ಕೆಕೆಆರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 20 …

Leave a Reply

Your email address will not be published. Required fields are marked *