Breaking News

ವೈದ್ಯರ ಮೇಲೆ ಹಲ್ಲೆ ಖಂಡಿಸಿ ರಾತ್ರಿ ಕ್ಯಾಂಡಲ್ ಲೈಟ್ ಮಾರ್ಚ್‍‌

ಇತ್ತೀಚೆಗೆ ಯುವ ವೈದ್ಯರ ಮೇಲೆ ನಡೆದ ತೀವ್ರತರ ಹಲ್ಲೆಯನ್ನು ಖಂಡಿಸಿ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಮಣಿಪಾಲ ದಂತ ವೈದ್ಯಕೀಯ ಮಹಾವಿದ್ಯಾಲಯ, ಭಾರತೀಯ ವೈದ್ಯಕೀಯ ಸಂಘ ಉಡುಪಿ – ಕರಾವಳಿ ಮತ್ತು ಭಾರತೀಯ ದಂತ ವೈದ್ಯಕೀಯ ಸಂಘ ಉಡುಪಿ ಇವರು ಇಂದು ಜಂಟಿಯಾಗಿ ಮಣಿಪಾಲದ ಡಾ. ಟಿ ಎಂ ಎ ಪೈ ಹಾಲಿನಿಂದ ಕಸ್ತೂರ್ಬಾ ಆಸ್ಪತ್ರೆಯವರೆಗೆ ಸಂಜೆ 7 ಗಂಟೆಗೆ ಕ್ಯಾಂಡಲ್ ಲೈಟ್ ಮಾರ್ಚ್‍‌ ನಡೆಸಿದರು. ಇದರಲ್ಲಿ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮಣಿಪಾಲದ ಡೀನ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು, ಮಣಿಪಾಲ ದಂತ ವೈದ್ಯಕೀಯ ಮಹಾವಿದ್ಯಾಲಯದ ಡೀನ್, ಭಾರತೀಯ ವೈದ್ಯಕೀಯ ಸಂಘ ಉಡುಪಿ – ಕರಾವಳಿ ಪದಾಧಿಕಾರಿಗಳು ಮತ್ತು ಭಾರತೀಯ ದಂತ ವೈದ್ಯಕೀಯ ಸಂಘ ಉಡುಪಿಯ ಪದಾಧಿಕಾರಿಗಳೂ ಸೇರಿದಂತೆ ಸಹಸ್ರಕ್ಕೂ ಹೆಚ್ಚಿನ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಪಾಲ್ಗೊಂಡರು.

Share News

About admin

Check Also

ಇಂಜಿನಿಯರಿಂಗ್ ವಿದ್ಯಾರ್ಥಿನಿ ಅಪಹರಣ ; ತಂದೆಯಿಂದ ದೂರು ದಾಖಲು.

ಉಡುಪಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಅಪಹರಣ ನಡೆದಿದ್ದು, ಲವ್‌ ಜಿಹಾದ್‌ ಶಂಕೆ ವ್ಯಕ್ತವಾಗಿದೆ. ಒಂದೆಡೆ ಮುಸ್ಲಿಂ ಸಮುದಾಯದ ಯುವಕನೋರ್ವನ ಯುವತಿಯ ಕರೆದೊಯ್ದಿದ್ದು …

Leave a Reply

Your email address will not be published. Required fields are marked *